ಸಚಿನ್ ಸಹ ಮಾಲೀಕತ್ವದ ಕೇರಳ ಬ್ಲಾಸ್ಟರ್ಸ್ ಫುಟ್​ಬಾಲ್ ಕ್ಲಬ್ ಗೆ ಚಿರಂಜೀವಿ, ನಾಗಾರ್ಜುನ್ ಎಂಟ್ರಿ

ನಟ ಮತ್ತು ರಾಜಕಾರಣಿ ಚಿರಂಜೀವಿ, ನಟ ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಭಾರತೀಯ ಚಿತ್ರೋದ್ಯಮದ ಕೆಲವು ದಿಗ್ಗಜರು....
ಕೇರಳ ಸಿಎಂ ಭೇಟಿ ಮಾಡಿದ ಸಚಿನ್, ಚಿರಂಜೀವಿ, ನಾಗಾರ್ಜುನ್ ಹಾಗೂ ಇತರರು
ಕೇರಳ ಸಿಎಂ ಭೇಟಿ ಮಾಡಿದ ಸಚಿನ್, ಚಿರಂಜೀವಿ, ನಾಗಾರ್ಜುನ್ ಹಾಗೂ ಇತರರು
ತಿರುವನಂತಪುರಂ: ನಟ ಮತ್ತು ರಾಜಕಾರಣಿ ಚಿರಂಜೀವಿ, ನಟ ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಭಾರತೀಯ ಚಿತ್ರೋದ್ಯಮದ ಕೆಲವು ದಿಗ್ಗಜರು ಬುಧವಾರ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಹ ಮಾಲೀಕತ್ವದ ಕೇರಳ ಬ್ಲಾಸ್ಟರ್ಸ್ ಫುಟ್​ಬಾಲ್ ಕ್ಲಬ್ ಗೆ ಸೇರಿಕೊಂಡಿದ್ದಾರೆ.
ಚಿರಂಜೀವಿ, ನಾಗಾರ್ಜುನ, ನಿರ್ಮಾಪಕ ಅಲ್ಲು ಅರವಿಂದ್ ಹಾಗೂ ಉದ್ಯಮಿ, ಸೀರಿಯಲ್ ನಿರ್ಮಾಪಕ ನಿಮ್ಮಗಡ ಪ್ರಸಾದ್ ಅವರು ಬ್ಲಾಸ್ಟರ್ಸ್ ಸ್ಪೋರ್ಟ್ಸ್ ಪ್ರೈ, ಲಿ.ನಲ್ಲಿ ಹೂಡಿಕೆ ಮಾಡುವ ಮೂಲಕ ಸಚಿನ್ ಗೆ ಕೈಜೋಡಿಸಿದ್ದಾರೆ.
ಸಚಿನ್ ಹಾಗೂ ಕೇರಳ ಸರ್ಕಾರ ಜಂಟಿಯಾಗಿ ಕೇರಳದಲ್ಲಿ ಫುಟ್​ಬಾಲ್ ಅಕಾಡೆಮಿ ಸ್ಥಾಪನೆಗೆ ಸಿದ್ಧತೆ ನಡೆಸಿದ್ದು, ಈ ಸಂಬಂಧ ಸಚಿನ್ ಹಾಗೂ ಸಹ ಮಾಲೀಕರಾದ ಚಿರಂಜೀವಿ, ನಾಗಾರ್ಜುನ್ ಹಾಗೂ ಇತರರು ಇಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯ ಮಾಡುವಂಥ 100ಕ್ಕೂ ಹೆಚ್ಚು ಫುಟ್​ಬಾಲ್ ಆಟಗಾರರನ್ನು ತಯಾರು ಮಾಡುವುದು ಅಕಾಡೆಮಿ ಪ್ರಮುಖ ಉದ್ದೇಶವಾಗಿದೆ.
ಕೇರಳದಲ್ಲಿ ಫುಟ್​ಬಾಲ್ ಕ್ರೀಡೆ ಸಾಕಷ್ಟು ಜನಪ್ರಿಯ ಆಗಿರುವ ಹಿನ್ನೆಲೆಯಲ್ಲಿ ಪುಟ್​ಬಾಲ್ ಅಕಾಡೆಮಿ ನಿರ್ಮಾಣಕ್ಕೆ ಸಂಬಂಧಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬುಧವಾರ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಅಕಾಡೆಮಿಯಿಂದ ಸ್ಥಳೀಯ ಆಸಕ್ತರಿಗೆ ಉತ್ತಮ ವೇದಿಕೆ ನಿರ್ಮಾಣವಾಗಲಿದ್ದು, ಅಕಾಡೆಮಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು, ತರಬೇತಿಯನ್ನು ನೀಡುವುದು ಯೋಜನೆಯ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ. ಕೇರಳ ಬ್ಲಾಸ್ಟಸ್ ಒಟ್ಟಾರೆ ಯೋಜನೆಯ ಮುತುವರ್ಜಿ ವಹಿಸಲಿದ್ದು, ಅಕಾಡೆಮಿಯನ್ನು ನಡೆಸುವ ಎಲ್ಲಾ ಜವಾಬ್ದಾರಿ ಹೊತ್ತುಕೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com