ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಭಾರತೀಯ ಮಹಿಳೆಯರ ಮಡಿಲಿಗೆ

ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಹಾಕಿ ಟೂರ್ನಿಯ ಫೈನಲ್ಸ್‌ನಲ್ಲಿ ಭಾರತ ತಂಡ 2–1 ಗೋಲುಗಳ ಅಂತರದಿಂದ ಚೀನಾವನ್ನು...
ಭಾರತೀಯ ಮಹಿಳಾ ಹಾಕಿ ತಂಡ(ಸಂಗ್ರಹ ಚಿತ್ರ)
ಭಾರತೀಯ ಮಹಿಳಾ ಹಾಕಿ ತಂಡ(ಸಂಗ್ರಹ ಚಿತ್ರ)
ಸಿಂಗಾಪೂರ್: ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಹಾಕಿ ಟೂರ್ನಿಯ ಫೈನಲ್ಸ್‌ನಲ್ಲಿ ಭಾರತ ತಂಡ 2–1 ಗೋಲುಗಳ ಅಂತರದಿಂದ ಚೀನಾವನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಸತತ ಎರಡು ಗೆಲುವುಗಳಿಂದ ಫೈನಲ್‌ ಪ್ರವೇಶಿಸಿದ್ದ ಭಾರತ, ಇಂದು ನಡೆದ ಫೈನಲ್ ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
2010ನೇ ಆವೃತ್ತಿಯಲ್ಲಿ 3ನೇ ಸ್ಥಾನ ಗಳಿಸಿದ್ದ ಭಾರತ, 2011ರಲ್ಲಿ ನಾಲ್ಕನೆ ಸ್ಥಾನಗಳಿಸಿತ್ತು. 2013ರಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತದ ಮಹಿಳೆಯರು, ಜಪಾನ್ ವಿರುದ್ಧ 0-1 ಅಂತರದಲ್ಲಿ ಸೋತು ರನ್ಸರ್ಸ್ ಅಪ್ ಸ್ಥಾನಕ್ಕೆ ತಪ್ತಿ ಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com