ಆ್ಯಂಡಿ ಮರ್ರೆಗೆ ಎಟಿಪಿ ಅಗ್ರಸ್ಥಾನ

ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಫೈನಲ್ ಪ್ರೇವೇಶಿಸಿರುವ ಆ್ಯಂಡಿ ಮರ್ರೆ ಅಗ್ರಸ್ಥಾನಕ್ಕೇರಿದ ಮೊದಲ ಬ್ರಿಟನ್ ಟೆನಿಸ್ ಆಟಗಾರನಾಗಿದ್ದಾರೆ.
ಆ್ಯಂಡಿ ಮರ್ರೆ
ಆ್ಯಂಡಿ ಮರ್ರೆ
ಪ್ಯಾರಿಸ್: ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಫೈನಲ್ ಪ್ರೇವೇಶಿಸಿರುವ ಆ್ಯಂಡಿ ಮರ್ರೆ ಅಗ್ರಸ್ಥಾನಕ್ಕೇರಿದ ಮೊದಲ ಬ್ರಿಟನ್ ಟೆನಿಸ್ ಆಟಗಾರನಾಗಿದ್ದಾರೆ.  ಆ್ಯಂಡಿ ಮರ್ರೆ ವಿರುದ್ಧ ಸೆಮಿ ಫೈನಲ್ ನಲ್ಲಿ ಸೆಣೆಸಬೇಕಿದ್ದ ಕೆನಡಾದ ಮಿಲೋಸ್ ರೋನಿಕ್ ಗಾಯಗೊಂಡಿದ್ದರಿಂದ ಸೆಮಿಫೈನಲ್ ಪಂದ್ಯದಿಂದ ಹೊರನಡೆಯಬೇಕಾಯಿತು. ಈ ಹಿನ್ನೆಲೆಯಲ್ಲಿ  ಆ್ಯಂಡಿ ಮರ್ರೆ ಫೈನಲ್ ಪ್ರವೇಶಿಸಿದ್ದಾರೆ. 
ಅಗ್ರಸ್ಥಾನ ಗಳಿಸಿರುವ ಆ್ಯಂಡಿ ಮರ್ರೆ, 122 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದ ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್ ಅವರನ್ನು ಹಿಂದಿಕ್ಕಿದ್ದಾರೆ. 1973ರಲ್ಲಿ ಎಟಿಪಿ ರ್ಯಾಂಕಿಂಗ್ ಗಳು ಕಂಪ್ಯೂಟರೀಕರಣವಾದ ನಂತರ ಬ್ರಿಟನ್ ಟೆನಿಸ್ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿರಲಿಲ್ಲ. ಇದೇ ಮೊದಲ ಬಾರಿಗೆ ಬ್ರಿಟನ್ ಟೆನಿಸ್ ಆಟಗಾರನಿಗೆ ನಂ.1 ಪಟ್ಟ ದೊರೆತಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com