ವಿಜೇಂದರ್ ಸಿಂಗ್
ಕ್ರೀಡೆ
ವಿಜೇಂದರ್ ಸಿಂಗ್ ಜಿದ್ದಾಜಿದ್ದಿನ ಹೋರಾಟಕ್ಕೆ ನೀವೂ ಸಾಕ್ಷಿಯಾಗಬೇಕೇ ಪಡೆಯಿರಿ ಆನ್‌ಲೈನ್‌ನಲ್ಲಿ ಟಿಕೆಟ್
ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಡಿಸೆಂಬರ್ 17ರಂದು ಆಡಲಿರುವ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್ ವೇಟ್ ಪ್ರಶಸ್ತಿ ಪಂದ್ಯದ ಟಿಕೆಟ್ ಆನ್ಲೈನ್ನಲ್ಲಿ...
ನವದೆಹಲಿ: ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಡಿಸೆಂಬರ್ 17ರಂದು ಆಡಲಿರುವ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್ ವೇಟ್ ಪ್ರಶಸ್ತಿ ಪಂದ್ಯದ ಟಿಕೆಟ್ ಆನ್ಲೈನ್ನಲ್ಲಿ ಲಭ್ಯವಿದೆ.
ಬುಕ್‌ಮೈಶೋ ವೆಬ್‌ಸೈಟ್‌ನಲ್ಲಿ ವಿಜೇಂದರ್ ಸಿಂಗ್ ಪಂದ್ಯದ ಒಂದು ಟಿಕೆಟ್ ಬೆಲೆ 1 ಸಾವಿರದಿಂದ 15 ಸಾವಿರ ರುಪಾಯಿವರೆಗಿನ ಮುಖಬೆಲೆಯ ಟಿಕೆಟ್ ಗಳಿದ್ದು ಮುಂಗಡ ಬುಕ್ ಮಾಡಿಕೊಳ್ಳಬಹುದು.
ಸಾಮಾನ್ಯ ಸ್ಟ್ಯಾಂಡ್ಸ್ 1 ಸಾವಿರ, ಪ್ರಿಮಿಯರ್ ಸ್ಟ್ಯಾಂಡ್ಸ್ 1500 ರು, ವಿಐಪಿ ಸ್ಟ್ಯಾಂಡ್ 2 ಸಾವಿರ ರು, ಗೋಲ್ಡನ್ ರಿಂಗ್ ಸೈಡ್ 10 ಸಾವಿರ, ಪ್ಲಾಟಿನಂ ರಿಂಗ್ ಸೈಡ್ 15 ಸಾವಿರ ರುಪಾಯಿ ಇದೆ.
ದೆಹಲಿ ತ್ಯಾಗರಾಜ ಸ್ಟೇಡಿಯಂನಲ್ಲಿ ಮಾಜಿ ವಿಶ್ವಚಾಂಪಿಯನ್ ತಾಂಜಾನಿಯಾದ 43 ಪಂದ್ಯಗಳನ್ನಾಡಿರುವ ಅನುಭವಿ ಫ್ರಾನ್ಸಿಸ್ ಚೆಕಾ ವಿರುದ್ಧ ಸೆಣಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ