ನ್ಯೂಯಾರ್ಕ್: ವಿಶ್ವ ಚೆಸ್ ಚಾಂಪಿಯನ್ ಷಿಫ್ ನಲ್ಲಿ ಸತತ ಡ್ರಾ ಫಲಿತಾಂಶಗಳ ನಂತರ ಇದೀಗ ಕುತೂಹಲ ತಿರುವು ಸಿಕ್ಕಿದೆ.
ಹಾಲಿ ಚಾಂಪಿಯನ್ ಮ್ಯಾಗ್ನೆಸ್ ಕಾರ್ಲ್‌ಸನ್ ಹಾಗೂ ರಷ್ಯಾದ ಸೆರ್ಗಿ ಕರ್ಜಾಕಿನ್ ನಡುವೆ ನಡೆದ 8ನೇ ಪಂದ್ಯದಲ್ಲಿ ಕಾರ್ಲ್‌ಸನ್ ರನ್ನು ಕರ್ಜಾಕಿನ್ ಮಣಿಸಿ ಮುನ್ನಡೆ ಪಡೆದುಕೊಂಡಿದ್ದಾರೆ.
ಫುಲ್ಟನ್ ಮಾರ್ಕೆಟ್ ಕಟ್ಟಡದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಕಾರ್ಲ್‌ಸನ್ ಆರಂಭಿಕ ಹಂತದಲ್ಲಿ ಮಾಡಿದ ಕೆಲ ಪ್ರಮಾದಗಳನ್ನು ಕರ್ಜಾಕಿನ್ ಯಶಸ್ವಿಯಾಗಿ ಬಳಸಿಕೊಂಡು ಜಯ ಗಳಿಸಿದರು.
ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಇನ್ನು 4 ಪಂದ್ಯಗಳು ಬಾಕಿ ಇರುವಾಗಲೇ ಕರ್ಜಾಕಿನ್ 4.5 ಅಂಕ ಸಂಪಾದಿಸಿದ್ದರೆ, ಕಾರ್ಲ್‌ಸನ್ 3.5 ಅಂಕ ಹೊಂದಿದ್ದಾರೆ.