ಹಾಂಗ್‌‌ ಕಾಂಗ್‌ ಒಪನ್‌ ಸೂಪರ್‌ ಸೀರಿಸ್‌: ಪಿ.ವಿ ಸಿಂಧುಗೆ ಪರಾಭವ

ಹಾಂಗ್‌‌ ಕಾಂಗ್‌ ಒಪನ್‌ ಸೂಪರ್‌ ಸೀರಿಸ್‌ನ ಮಹಿಳೆಯರ ಫೈನಲ್‌ ಪಂದ್ಯದಲ್ಲಿ ಭಾರತದ ಭರವಸೆಯ ಬ್ಯಾಡ್ಮಿಂಟನ್‌ ಆಟಗಾರ್ತಿ...
ಪಿ.ವಿ ಸಿಂಧು
ಪಿ.ವಿ ಸಿಂಧು
Updated on

ಹಾಂಗ್ ಕಾಂಗ್: ಹಾಂಗ್‌‌ ಕಾಂಗ್‌ ಒಪನ್‌ ಸೂಪರ್‌ ಸೀರಿಸ್‌ನ ಮಹಿಳೆಯರ ಫೈನಲ್‌ ಪಂದ್ಯದಲ್ಲಿ ಭಾರತದ ಭರವಸೆಯ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ. ವಿ. ಸಿಂಧು ಪರಾಭವಗೊಂಡಿದ್ದಾರೆ

ಇಂದು ನಡೆದ ಅಂತಿಮ ಹಣಾಹಣಿಯಲ್ಲಿ ಚೈನೀಸ್ ಥೇಪೇ ದೇಶದ ಟಾಯ್ ಜು ಯಿಂಗ್ ವಿರುದ್ಧ ಸಿಂಧು 15-21, 17-21 ನೇರ ಸೆಟ್'ಗಳಿಂದ ಸೋಲನುಭವಿಸಿದರು.ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ಚೆಂಗ್‌ ಗಾನ್‌-ಯಿ ವಿರುದ್ಧ ಸಿಂಧು 21-14, 21-16 ನೇರ ಸೆಟ್‌ಗಳಿಂದ ಗೆಲುವು ದಾಖಲಿಸಿದ್ದರು.

ಪಿವಿ ಸಿಂಧು ಕಳೆದ ಬಾರಿ ನಡೆದ ಚೈನಾ ಓಪನ್ ಸೂಪರ್ ಸೀರೀಸ್ ಟೂರ್ನಿ ಗೆದ್ದಿದ್ದರು. ಆದರೆ, ಸಿಂಧುಗೆ ಸತತ ಎರಡು ಟೂರ್ನಿ ಗೆಲ್ಲುವ ಅವಕಾಶವನ್ನು ಥೈಪೆ ಆಟಗಾರ್ತಿ ನಿರಾಕರಿಸಿದರು. ಸದ್ಯ ವಿಶ್ವದ 10ನೇ ಶ್ರೇಯಾಂಕದಲ್ಲಿರುವ ಸಿಂಧು, ಈ ಟೂರ್ನಿಯ ಫೈನಲ್ ಹಂತಕ್ಕೇರಿದ ಸಾಧನೆಯಿಂದ ಎರಡು ಸ್ಥಾನ ಹೆಚ್ಚಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com