ಯೋಗೇಶ್ವರ್ ದತ್- ಶೀತಲ್
ಕ್ರೀಡೆ
ಶೀತಲ್ ಜೊತೆ ಯೋಗೇಶ್ವರ್ ದತ್ ನಿಶ್ಚಿತಾರ್ಥ, ಜನವರಿ 16ಕ್ಕೆ ಮದುವೆ
ರಿಯೋ ಒಲಿಂಪಿಕ್ಸ್ ಅರ್ಹತಾ ಸುತ್ತಿನಿಂದ್ಲೇ ಹೊರಬಿದ್ದಿದ್ದ ಹಾಗೂ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕಂಚಿನ...
ನವದೆಹಲಿ: ರಿಯೋ ಒಲಿಂಪಿಕ್ಸ್ ಅರ್ಹತಾ ಸುತ್ತಿನಿಂದ್ಲೇ ಹೊರಬಿದ್ದಿದ್ದ ಹಾಗೂ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕಂಚಿನ ಪದಕ ಗೆದ್ದಿದ್ದ ಭಾರತದ ಭರವಸೆಯ ಕುಸ್ತಿ ಪಟು ಯೋಗೇಶ್ವರ್ ದತ್ ಅವರು ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಯೋಗೇಶ್ವರ್ ದತ್ ಅವರು ಭಾನುವಾರ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಜೈ ಭಗವಾನ್ ಶರ್ಮಾ ಅವರ ಪುತ್ರಿ ಶೀತಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದತ್ ಕುಟುಂಬದ ಆಪ್ತರು ಹಾಗೂ ಕೆಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.
ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜಿ ಭೂಷಣ್ ಶರಣ್ , ಎಎಪಿ ಹರಿಯಾಣ್ ರಾಜ್ಯ ಮುಖ್ಯಸ್ಥ ನವೀನ್ ಜೈಹಿಂದ್ ಸಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಯುವ ಜೋಡಿ ಮುಂದಿನ ವರ್ಷ ಜನವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ.

