ಕ್ರಿಸ್ಟಿಯಾನೋ ರೊನಾಲ್ಡೋ
ಕ್ರೀಡೆ
ಶೂ ಧರಿಸಿ ಬುದ್ಧನ ವಿಗ್ರಹವಿರುವ ಕಟ್ಟೆಯ ಮೇಲೆ ಕಾಲಿಟ್ಟು ಟೀಕಿಗೆ ಗುರಿಯಾದ ರೊನಾಲ್ಡೋ
ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಬುದ್ಧನ ವಿಗ್ರಹವಿರುವ ಕಟ್ಟೆಯ ಮೇಲೆ ಶೂ ಧರಿಸಿದ ಕಾಲನ್ನು ಇರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ...
ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಬುದ್ಧನ ವಿಗ್ರಹವಿರುವ ಕಟ್ಟೆಯ ಮೇಲೆ ಶೂ ಧರಿಸಿದ ಕಾಲನ್ನು ಇರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಈ ಚಿತ್ರ ಇದೀಗ ಬೌದ್ಧರ ಮತ್ತು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ರೊನಾಲ್ಡೋ ಅಭಿಮಾನಿಯೊಬ್ಬ ನೀವು ಮೊದಲು ಬುದ್ಧನಿಗೆ ಗೌರವ ಕೊಡುವುದನ್ನು ಕಲಿಯಬೇಕು. ನೀವು ಯಾವುದೇ ಧರ್ಮ ಪಾಲನೆ ಮಾಡಿ. ಆದರೆ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರಬೇಡಿ ಎಂದು ಫೋಟೋಗೆ ಕಾಮೆಂಟ್ ಹಾಕಿದ್ದಾರೆ.
ಈ ಫೋಟೋ ಕುರಿತಂತೆ ಇನ್ ಸ್ಟ್ರಾಗ್ರಮ್ ನಲ್ಲಿ ಸಾವಿರಾರು ಜನರು ರೊನಾಲ್ಡೋ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಜತೆಗೆ ರೊನಾಲ್ಡೋ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ರೊನಾಲ್ಡೋ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರು. ಖಾತೆಯಿಂದ ಇನ್ನು ಫೋಟೋ ಡಿಲೀಟ್ ಮಾಡಿಲ್ಲ ಮತ್ತು ಕ್ಷಮಾಪಣೆಯನ್ನೂ ಕೇಳಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ