ಲಂಡನ್ ಒಲಿಂಪಿಕ್ಸ್: ಯೋಗೇಶ್ವರ್ ದತ್ ಬೆಳ್ಳಿ ಪದಕ ಚಿನ್ನಕ್ಕೆ ಬಡ್ತಿ ಸಾಧ್ಯತೆ

2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕುಸ್ತಿಯ 60 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಯೋಗೇಶ್ವರ್ ದತ್ ಅವರಿಗೆ ಅದೃಷ್ಠ...
ಯೋಗೇಶ್ವರ್ ದತ್
ಯೋಗೇಶ್ವರ್ ದತ್
ನವದೆಹಲಿ: 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕುಸ್ತಿಯ 60 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಯೋಗೇಶ್ವರ್ ದತ್ ಅವರಿಗೆ ಅದೃಷ್ಠ ಖುಲಾಯಿಸಿದಂತಿದೆ. ಅವರ ಕಂಚಿನ ಪದಕ ಇದೀಗ ಚಿನ್ನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇದೆ. 
ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರಷ್ಯಾದ ಬೆಸಿಕ್ ಕುಡ್ಕೋವ್ ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬೀಳುವ ಮೂಲಕ ಅವರ ಪದಕವನ್ನು ಹಿಂಪಡೆದು ಯೋಗೇಶ್ವರ್ ದತ್ ಗೆ ಎರಡನೇ ಸ್ಥಾನಕ್ಕೆ ಬಡ್ತಿ ನೀಡಿ ಬೆಳ್ಳಿ ಪದಕ ನೀಡಲು ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್(ಯುಡಬ್ಲ್ಯೂಡಬ್ಲ್ಯೂ) ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ತೀರ್ಮಾನಿಸಿತ್ತು. 
ಡೋಪಿಂಗ್ ಟೆಸ್ಟ್ ನಲ್ಲಿ ಹಲವು ಆಟಗಾರರು ಸಿಕ್ಕಿ ಬೀಳುತ್ತಿರುವುದರಿಂದ 2008ರ ಬೀಜಿಂಗ್ ಒಲಿಂಪಿಕ್ಸ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಆಟಗಾರರನ್ನು ಮರು ಪರೀಕ್ಷೆಗೆ ಒಳಪಡಿಸಲು ವಿಶ್ವ ಡೋಪಿಂಗ್ ಏಜೆನ್ಸಿ ತೀರ್ಮಾನಿಸಿದ್ದು, ಒಂದು ವೇಳೆ ಲಂಡನ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಗೆದ್ದ ಅಜರ್ಬೈಜಾನ್ ಆಟಗಾರ ತೊಘ್ರುಲ್ ಆಸ್ಗರ್ವೋ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಫೇಲಾದರೆ ಯೋಗೇಶ್ವರ್ ದತ್ ಅವರಿಗೆ ಚಿನ್ನದ ಪದಕಕ್ಕೆ ಬಡ್ತಿ ಸಿಗಲಿದೆ. 
2016ರ ರಿಯೋ ಒಲಿಂಪಿಕ್ಸ್ ನಲ್ಲಿ 65 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ಯೋಗೇಶ್ವರ್ ದತ್ ಅರ್ಹತಾ ಸುತ್ತಿನಲ್ಲಿ ಸೋತು ಕೋಟ್ಯಾಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com