ತಿರುಪತಿ ಸನ್ನಿಧಾನದಲ್ಲಿ ಪಿ.ವಿ.ಸಿಂಧು ಹಾಗೂ ಅವರ ಕೋಚ್ ಪುಲ್ಲೇಲ ಗೋಪಿಚಂದ್
ಕ್ರೀಡೆ
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ 68 ಕೆಜಿ ಬೆಲ್ಲದ ತುಲಾಭಾರ ನಡೆಸಿದ ಸಿಂಧು
ಬ್ಯಾಡ್ಮಿಂಟನ್ ಬೆಳ್ಳಿ ಪದಕ ತಾರೆ ಪಿ.ವಿ.ಸಿಂಧು, ಅವರ ಕೋಚ್ ಪುಲ್ಲೇಲ ಗೋಪಿಚಂದ್ ಮತ್ತು ಅವರ ಕುಟುಂಬ...
ತಿರುಪತಿ: ಬ್ಯಾಡ್ಮಿಂಟನ್ ಬೆಳ್ಳಿ ಪದಕ ತಾರೆ ಪಿ.ವಿ.ಸಿಂಧು, ಅವರ ಕೋಚ್ ಪುಲ್ಲೇಲ ಗೋಪಿಚಂದ್ ಮತ್ತು ಅವರ ಕುಟುಂಬ ಸದಸ್ಯರು ಭಾನುವಾರ ಮುಂಜಾನೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿ ದೇವರ ದರ್ಶನ ಪಡೆದರು.
ಪಿ.ವಿ.ಸಿಂಧು ಆಗಮನದ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ಅಧಿಕಾರಿಗಳು ವಿಐಪಿ ವಿಭಾಗದಲ್ಲಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಿದ್ದರು.
ತಮ್ಮ ಹರಕೆ ತೀರಿಸಿದ ಸಿಂಧು 68 ಕೆಜಿ ತೂಕದ ಬೆಲ್ಲದ ತುಲಾಭಾರ ನಡೆಸಿದರು. ದೇವಸ್ಥಾನದ ಅಧಿಕಾರಿಗಳು ಸಿಂಧು ಕುಟುಂಬ ಮತ್ತು ಗೋಪಿಚಂದ್ ಅವರಿಗೆ ಪ್ರಸಾದ ವಿತರಣೆ ಮಾಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ