ಯುಎಸ್ ಓಪನ್ ನಲ್ಲಿ ಭಾರತದ ಅಭಿಯಾನವನ್ನು ಜೀವಂತವಾಗಿಟ್ಟಿದ್ದ ಡಬಲ್ಸ್ ನಂ.1 ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಜೆಕ್ ಗಣರಾಜ್ಯದ ಆಟಗಾರ್ತಿ ಬಾರ್ಬರಾ ಸ್ಟ್ರೈಕೋವಾ ಜೋಡಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ಯಾರೋಲಿನ್ ಗಾರ್ಸಿಯಾ ಮತ್ತು ಕ್ರಿಸ್ಟಿನ ಮ್ಲಾಡೊನೋವಿಕ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಇಲ್ಲಿನ ಗ್ರಾಂಡ್ ಸ್ಟಾಂಡ್ ಕೋರ್ಟ್ ನಲ್ಲಿ ನಡೆದ ಮಹಿಳಾ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಂಬರ್ 1 ಶ್ರೇಯಾಂಕಿತ ಕ್ಯಾರೋಲಿನ್ ಗಾರ್ಸಿಯಾ ಮತ್ತು ಕ್ರಿಸ್ಟಿನ ಮ್ಲಾಡೊನೋವಿಕ್ ವಿರುದ್ಧ ಸಾನಿಯಾ-ಬಾರ್ಬರ ಜೋಡಿ 6-7(3), 1-6 ನೇರ ಸೆಟ್ ಗಳಿಂದ ಸೋತು ನಿರಾಶೆ ಮೂಡಿಸಿದ್ದಾರೆ.
ಇಂಡೋ-ಜೆಕ್ ಜೋಡಿ ಅಮೆರಿಕದ ನಿಕೋಲ್ ಗಿಬ್ಸ್ ಹಾಗೂ ಜಪಾನ್ ನ ನಾವೋ ಹಿಬೊನೋ ಜೋಡಿಯನ್ನು 6-4, 7-5 ನೇರ ಸೆಟ್ ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.