ರಿಯೋ ಒಲಂಪಿಕ್ಸ್: ಪಿ.ವಿ ಸಿಂಧು, ಸಾಕ್ಷಿಗೆ ಸರ್ಕಾರದಿಂದ ಸಿಕ್ಕಿದ ಧನ ಸಹಾಯ ಶೇ. 1.66ರಷ್ಟು ಮಾತ್ರ

ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿ ವಾಪಸ್ ಬಂದಿರುವ ಭಾರತೀಯ ಕ್ರೀಡಾಪಟುಗಳಿಗೆ ಸರ್ಕಾರ ಒಟ್ಟಾರೆ 36.85 ಕೋಟಿ ರೂ ಹಣ ಖರ್ಚು ಮಾಡಿದೆ ಎಂದು
ಪಿ.ವಿ ಸಿಂಧು ಮತ್ತು ಸಾಕ್ಷಿ ಮಲಿಕ್
ಪಿ.ವಿ ಸಿಂಧು ಮತ್ತು ಸಾಕ್ಷಿ ಮಲಿಕ್

ನವದೆಹಲಿ: ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿ ವಾಪಸ್ ಬಂದಿರುವ ಭಾರತೀಯ ಕ್ರೀಡಾಪಟುಗಳಿಗೆ ಸರ್ಕಾರ ಒಟ್ಟಾರೆ 36.85 ಕೋಟಿ ರೂ ಹಣ ಖರ್ಚು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಕ್ರೀಡಾ ಇಲಾಖೆಯ ಮಾಹಿತಿ ಪ್ರಕಾರ ಖರ್ಚು ಮಾಡಿದ ಒಟ್ಟಾರೆ ಹಣದಲ್ಲಿ ಶೇ.1.66 ರಷ್ಟು ಹಣ ಪದಕದ ರೂಪದಲ್ಲಿ ವಾಪಸಾಗಿದೆ.

ಸರ್ಕಾರ ಖರ್ಚು ಮಾಡಿದ ಒಟ್ಟು ಹಣದ ಅರ್ಧದಷ್ಟು ಶೂಟಿಂಗ್ ಗೇಮ್ ಗಾಗಿ  ವ್ಯಯವಾಗಿದೆ.  ಈ ಹಿಂದೆ ಒಲಂಪಿಕ್ಸ್ ಗೇಮ್ ಳಲ್ಲಿ ಶೂಟಿಂಗ್ ನಲ್ಲಿ ಹಲವು ಪದಕಗಳು ಬಂದಿದ್ದವು, ಆದರೆ ಈ ಬಾರಿಯ ರಿಯೋ ಒಲಂಪಿಕ್ಸ್ ನಲ್ಲಿ ಶೂಟಿಂಗ್ ಗೇಮ್ ನಲ್ಲಿ ಒಂದೇ ಒಂದು ಪದಕ ಸಹ ಬಂದಿಲ್ಲ.

ಮಹಿಳೆಯರ ವಿಭಾಗದ ರಿಲೆಗಾಗಿ 2.94 ರು ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ. ಇನ್ನೂ ರಿಯೋ ಒಂಲಿಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ ಪಿವಿ ಸಿಂಧು ಗೆ ಸರ್ಕಾರ ಖರ್ಚು ಮಾಡಿದ್ದು 45.27 ಲಕ್ಷ ಮಾತ್ರ, ಮೊದಲ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಗೆ ಕೇವಲ 15.86 ಲಕ್ಷ ಹಣ ಮಾತ್ರ ವ್ಯಯಿಸಲಾಗಿದೆ.

ಪ್ರತಿ ಬಾರಿಯ ಒಲಂಪಿಕ್ಸ್ ಗೆ ಗ್ರೇಟ್ ಬ್ರಿಟನ್ 350 ಮಿಲಿಯನ್ ಡಾಲರ್ ಹಣ, ಆಸ್ಟ್ರೇಲಿಯಾ 332 ಮಿಲಿಯನ್  ಡಾಲರ್, ಹಣ ಖರ್ಚು ಮಾಡಲಾಗಿದೆ. ಬ್ರಿಟನ್ ಪ್ರತಿ ಅಥ್ಲೀಟ್ ಗೆ 5 ಕೋಟಿ ರು ಹಣ ಖರ್ಚು ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com