ಟೋರೇ ಪಾನ್ ಪೆಸಿಫಿಕ್ ಓಪನ್: ಫೈನಲ್ ಗೆ ಸಾನಿಯಾ-ಸ್ಟ್ರೈಕೋವಾ

ಭಾರತದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜೆಕ್ ಗಣರಾಜ್ಯದ ಬಾರ್ಬರ ಸ್ಟ್ರೈಕೋವಾ ಜೋಡಿ ಟೋರೇ ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯಲ್ಲಿ...
ಸಾನಿಯಾ ಮಿರ್ಜಾ, ಬಾರ್ಬರ ಸ್ಟ್ರೈಕೋವಾ
ಸಾನಿಯಾ ಮಿರ್ಜಾ, ಬಾರ್ಬರ ಸ್ಟ್ರೈಕೋವಾ
Updated on

ಟೋಕಿಯೋ: ಭಾರತದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜೆಕ್ ಗಣರಾಜ್ಯದ ಬಾರ್ಬರ ಸ್ಟ್ರೈಕೋವಾ ಜೋಡಿ ಟೋರೇ ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಮಹಿಳಾ ಡಬಲ್ಸ್ ಸೆಮಿಫೈನಲ್ ನಲ್ಲಿ 2ನೇ ಶ್ರೇಯಾಂಕಿತ ಸಾನಿಯಾ-ಸ್ಟ್ರೈಕೋವಾ ಜೋಡಿ ಕೆನಡದ ಗ್ಯಾಬ್ರಿಯೆಲ್ ಡಬ್ರೋವ್ ಸ್ಕಿ ಮತ್ತು ಸ್ಪೇನ್ ನ ಮರಿಯಾ ಜೋಸ್ ಮಾರ್ಟಿನಾ ಸ್ಯಾಂಚೆಜ್ ಜೋಡಿಯನ್ನು 4-6, 6-3, 10-5 ಸೆಟ್ ಗಳಿಂದ ಮಣಿಸಿತು.

ಸಾನಿಯಾ-ಸ್ಟ್ರೈಕೋವಾ ಜೋಡಿ ಇನ್ನು ಫೈನಲ್ ನಲ್ಲಿ ಚೀನಾದ ಚೆನ್ ಲಿಯಾಂಗ್-ಜಾವೋ ಯಂಗ್ ಮತ್ತು 3ನೇ ಶ್ರೇಯಾಂಕಿತ ಅಮೆರಿಕದ ರಾಕ್ವೆಲ್ ಅಟಾವೋ-ಅಬಿಗೈಲ್ ಸ್ಪಿಯರ್ಸ್ ಜೋಡಿ ನಡುವಿನ ಪಂದ್ಯದ ವಿಜೇತರ ಜತೆ ಸೆಣಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com