ಅಭಿನವ್ ಬಿಂದ್ರಾ
ಅಭಿನವ್ ಬಿಂದ್ರಾ

ಪದಕಗಳು ಮುಖ್ಯ, ಆದರೆ ಅವೇ ಜೀವನವಲ್ಲ: ಅಭಿನವ್ ಬಿಂದ್ರಾ

ರಿಯೋ ಒಲಿಂಪಿಕ್ಸ್ ಫೈನಲ್ ಬಳಿಕ ತಾವು ವಿದಾಯದ ನಿರ್ಧಾರ ಘೋಷಿಸಿದ್ದ ಭಾರತದ ಟಾಪ್ ಶೂಟರ್ ಅಭಿನವ್ ಬಿಂದ್ರಾ ಅವರು ತಮ್ಮ ಹೇಳಿಕೆ ಬದ್ಧರಾಗಿದ್ದು...

ಬೆಂಗಳೂರು: ರಿಯೋ ಒಲಿಂಪಿಕ್ಸ್ ಫೈನಲ್ ಬಳಿಕ ತಾವು ವಿದಾಯದ ನಿರ್ಧಾರ ಘೋಷಿಸಿದ್ದ ಭಾರತದ ಟಾಪ್ ಶೂಟರ್ ಅಭಿನವ್ ಬಿಂದ್ರಾ ಅವರು ತಮ್ಮ ಹೇಳಿಕೆ ಬದ್ಧರಾಗಿದ್ದು, ಪದಕಗಳು ಮುಖ್ಯ ಆದರೆ ಅವುಗಳೇ ಜೀವನವಲ್ಲ ಎಂದು ಹೇಳಿದ್ದರೆ.

ಇದೀಗ ನನಗೆ 33 ವರ್ಷ ನಾನು ಒಲಿಂಪಿಕ್ಸ್ ನಲ್ಲಿ ಐದು ಬಾರಿ ಸ್ಪರ್ಧಿಸಿದ್ದು ಪದಕ ಗೆದ್ದ ಖುಷಿ ಇದೆ. ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವುದು ಒಂದು ಪ್ರಕ್ರಿಯೆಯ ಫಲಿತಾಂಶವಷ್ಟೆ. ಪದಕ ಗೆದ್ದ ಖುಷಿ ಹಾಗೂ ಅದನ್ನು ಗೆದ್ದ ಅನುಭವಗಳು ನನ್ನೊಂದಿಗಿದೆ. ಪದಕಗಳು ಮುಖ್ಯ ಆದರೆ ಅವೇ ಜೀವನವಲ್ಲ ಎಂದು ಹೇಳಿದ್ದಾರೆ.

2008ರ ಬೀಜೀಂಗ್ ಒಲಿಂಪಿಕ್ಸ್ ನಲ್ಲಿ ಗೆದ್ದ ಪದಕ ನನ್ನ ಮನೆಯ ರೂಂವಿನಲ್ಲಿ ಭದ್ರವಾಗಿಟ್ಟಿದ್ದೇನೆ. ಅದನ್ನು ಐದಾರು ಬಾರಿ ನೋಡುತ್ತೇನೆ ಆದರೆ ಅದಕ್ಕೆ ಒಳಪಟ್ಟಿಲ್ಲ ಎಂದರು.

ನಾನು ಐದು ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದೆ ಅವುಗಳಲ್ಲಿ ರಿಯೋ ಒಲಿಂಪಿಕ್ಸ್ ನನ್ನ ಮೆಚ್ಚಿನ ಕೂಟವಾಗಿದೆ. ರಿಯೋನಲ್ಲಿ ಸ್ಫರ್ಧಿಸಿದ್ದ ವೇಳೆ ನನ್ನ ಸಂಪೂರ್ಣ ಶ್ರಮ ಹಾಕಿದ್ದೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com