ಡೆವಿಸ್ ಕಪ್: ಲಿಯಾಂಡರ್ ಪೇಸ್ ಕೈಬಿಟ್ಟ ಮಹೇಶ್ ಭೂಪತಿ

ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರನ್ನು ನಾಳೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಉಜ್‌ಬೇಕಿಸ್ತಾನ ವಿರುದ್ಧದ ಡೆವಿಸ್ ಕಪ್ ನಿಂದ
ಮಹೇಶ್ ಭೂಪತಿ, ಲಿಯಾಂಡರ್ ಪೇಸ್
ಮಹೇಶ್ ಭೂಪತಿ, ಲಿಯಾಂಡರ್ ಪೇಸ್
ಬೆಂಗಳೂರು: ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರನ್ನು ನಾಳೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಉಜ್‌ಬೇಕಿಸ್ತಾನ ವಿರುದ್ಧದ ಡೆವಿಸ್ ಕಪ್ ನಿಂದ ಕೈಬಿಡಲಾಗಿದೆ.
ಭಾರತ ತಂಡದ ಆಟವಾಡದ ನಾಯಕ ಮಹೇಶ್ ಭೂಪತಿ ಅವರು ಡೆವಿಸ್ ಕಪ್ ಎರಡನೇ ಸುತ್ತಿನ ಗ್ರೂಪ್ 1ರಲ್ಲಿ ಶ್ರೀರಾಮ್ ಬಾಲಾಜಿ ಜೊತೆ ರೋಹನ್ ಬೋಪಣ್ಣ ಅವರನ್ನು ಆಯ್ಕೆ ಮಾಡಿದ್ದಾರೆ.
ಏಪ್ರಿಲ್ 7ರಿಂದ 9ರವರೆಗೆ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ನಡೆಯಲಿರುವ ಡೆವಿಸ್ ಕಪ್ ನ ಡಬಲ್ಸ್ ನಲ್ಲಿ ಬೋಪಣ್ಣ ಮತ್ತು ಬಾಲಾಜಿ ಉಜ್ ಬೆಕಿಸ್ತಾನದ ಫಾರುಖ್ ದಸ್ತೊವ್ ಮತ್ತು ಸಂಜಾರ್ ಫಯಾಝೀವ್ ಅವರೊಂದಿಗೆ ಸೆಣಸಲಿದ್ದಾರೆ. ಇನ್ನು ಸಿಂಗಲ್ಸ್ ನಲ್ಲಿ ಗಾಯಗೊಂಡ ಯುಕಿ ಭಾಂಬ್ರಿ ಬದಲು ರಾಮಕುಮಾರ್ ರಾಮನಾಥನ್ ಅವರು ಆಡಲಿದ್ದಾರೆ.
ಪೇಸ್ ಮತ್ತು ಬೋಪಣ್ಣ ಅವರನ್ನು ಮೀಸಲು ಆಟಗಾರರನ್ನಾಗಿ ಮಾಡಲಾಗಿತ್ತು. ಆದರೆ ನಾಲ್ಕು ದಿನಗಳ ಹಿಂದೆ ಯೂಕಿ ಭಾಂಬ್ರಿ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರಿಂದ ಅವರ ಸ್ಥಾನಕ್ಕೆ ಬೋಪಣ್ಣ ಅಥವಾ ಪೇಸ್ ಅವರಲ್ಲಿ ಒಬ್ಬರು ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಅಂತಿಮವಾಗಿ ರಾಮಕುಮಾರ್ ರಾಮನಾಥನ್ ಅವರು ಆಯ್ಕೆಯಾಗಿದ್ದಾರೆ.
ಒಂದು ಕಾಲದಲ್ಲಿ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಅವರು ಅಂತರಾಷ್ಟ್ರೀಯ ಡಬಲ್ಸ್‌ ಪಂದ್ಯಗಳಲ್ಲಿ ಜೊತೆಯಾಗಿ ಆಡಿ ಭಾರತಕ್ಕೆ ಕೀರ್ತಿ ತಂದಿದ್ದ ಜೋಡಿ ಈಗ ಮುನಿಸಿಕೊಂಡಿದ್ದು, ಕಳೆದ 27 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲಿಯಾಂಡರ್ ಪೇಸ್ ಅವರನ್ನು ಡೆವಿಸ್ ಕಪ್ ತಂಡದಿಂದ ಕೈಬಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com