ದೇವೇಂದ್ರ ಜಜ್ಹಾರಿಯಾ ಮತ್ತು ಸರ್ದಾರ್ ಸಿಂಗ್
ದೇವೇಂದ್ರ ಜಜ್ಹಾರಿಯಾ ಮತ್ತು ಸರ್ದಾರ್ ಸಿಂಗ್

ಜರ್ಜಾರಿಯಾ, ಸರ್ದಾರ್ ಸಿಂಗ್ ಗೆ ಖೇಲ್ ರತ್ನ: ಹರ್ಮನ್ ಪ್ರೀತ್, ಪೂಜಾರಾ ಅರ್ಜುನ ಪ್ರಶಸ್ತಿಗೆ ಶಿಫಾರಸು

ಪ್ಯಾರಾಂಲಿಪಿಯನ್ ದೇವೇಂದ್ರ ಜರ್ಜಾರಿಯಾ, ಭಾರತದ ಹಾಕಿ ತಂಡದ ಕ್ಯಾಪ್ಟನ್ ಸರ್ದಾರ್ ಸಿಂಗ್ ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ...
ನವದೆಹಲಿ: ಪ್ಯಾರಾಂಲಿಪಿಯನ್ ದೇವೇಂದ್ರ ಜರ್ಜಾರಿಯಾ, ಭಾರತದ ಹಾಕಿ ತಂಡದ ಕ್ಯಾಪ್ಟನ್ ಸರ್ದಾರ್ ಸಿಂಗ್ ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಮತ್ತು ಕ್ರಿಕೆಟಿಗರಾದ ಚೇತೇಶ್ವರ ಪೂಜಾರ ಮತ್ತು ಹರ್ಮನ್ ಪ್ರೀತ್ ಕೌರ್  ಸೇರಿದಂತೆ ಒಟ್ಟು 17 ಕ್ರೀಡಾ ಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡುವಂತೆ ಪ್ರಶಸ್ತಿ ಆಯ್ಕೆ ಸಮಿತಿ ಶಿಫಾರಸು ಮಾಡಿದೆ.
ರಿಯೋ ಪ್ಯಾರಾಲಿಂಪಿಕ್ಸ್ ನ ಎಫ್-46 ಕ್ಯಾಟಗರಿಯಲ್ಲಿ ಪುರುಷರ ವಿಭಾಗದಲ್ಲಿ ದೇವೇಂದ್ರ ಜರ್ಜಾರಿಯಾ ಚಿನ್ನದ ಪದಕ ಗಳಿಸಿ ಭಾರತೀಯ ಪ್ಯಾರಾ ಅಥ್ಲೀಟ್ ಗಳಲ್ಲಿ ಯಶಸ್ವಿಯಾಗಿದ್ದರು.  2004 ರಲ್ಲಿ ಅಥೆನ್ಸ್ ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಎರಡು ಚಿನ್ನದ ಪದಕ ಗಳಿಸಿದ್ದರು.
ಹಾಕಿ ತಂಡದ ಕ್ಯಾಪ್ಟನ್ ಸರ್ದಾರ್ ಸಿಂಗ್ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಉತ್ತಮ ಪಾತ್ರ ವಹಿಸಿದ್ದರು. ಪೊಲಾಂಡ್ ನಲ್ಲಿ 2003-04 ರಲ್ಲಿ ನಡೆದ ಜ್ಯೂನಿಯರ್ ತಂಡದ ಹಾಕಿ ಪ್ರವಾಸದಲ್ಲಿ ಭಾರತ ತಂಡ ಪ್ರವೇಶಿಸಿದರು. ಪಾಕಿಸ್ತಾನ ವಿರುದ್ಧ 2006 ರಲ್ಲಿ ನಡೆದ ಪಂದ್ಯದಲ್ಲಿ ಜಯ ಸಾಧಿಸಿದ್ದರು. 2012 ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿ, ಹಾಗೂ 2015 ರಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.
ಪ್ರಶಸ್ತಿ ಆಯ್ಕೆ ಸಮಿತಿ 17 ಕ್ರೀಡಾ ಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗಾಗಿ ಶಿಫಾರಸು ಮಾಡಿದೆ. ಚೇತೇಶ್ವರ್ ಪೂಜಾರಾ, ಮಹಿಳಾ ಕ್ರಿಕೆಟ್ ತಂಡದ ಹರ್ಮನ್ ಪ್ರೀತ್ ಕೌರ್, ಪ್ಯಾರಾಲಿಂಪಿಕ್ ಮರಿಯಪ್ಪನ್ ತಂಗವೇಲು, ವರುಣ್ ಭಾಟಿ, ಗಾಲ್ಫರ್ ಚಾವ್ರಾಸಿಯಾ ಮತ್ತು ಹಾಕಿ ಆಟಗಾರ ಎಸ್ ವಿ ಸುನಿಲ್ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಆದರೆ ಕ್ರೀಡಾ ಸಚಿವಾಲಯ ಹೆಸರುಗಳನ್ನು ಇನ್ನೂ ಅಂತಿಮಗೊಳಿಸಬೇಕಿದೆ.

Related Stories

No stories found.

Advertisement

X
Kannada Prabha
www.kannadaprabha.com