10ನೇ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮೊಹಮ್ಮದ್ ಫರ್ಹಾ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 10 ಸಾವಿರ ಮೀ. ಓಟದಲ್ಲಿ ಬ್ರಿಟನ್ ಅಥ್ಲೀಟ್ ಲೆಜಂಡ್ ಮುಹಮ್ಮದ್ ಫರ್ಹಾ ಚಿನ್ನದ ಪದಕವನ್ನು ಗೆದ್ದಿದ್ದು ಜಾಗತಿಕ ಮಟ್ಟದ...
ಮೊಹಮ್ಮದ್ ಫರ್ಹಾ
ಮೊಹಮ್ಮದ್ ಫರ್ಹಾ
ಲಂಡನ್: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 10 ಸಾವಿರ ಮೀ. ಓಟದಲ್ಲಿ ಬ್ರಿಟನ್ ಅಥ್ಲೀಟ್ ಲೆಜಂಡ್ ಮೊಹಮ್ಮದ್ ಫರ್ಹಾ ಚಿನ್ನದ ಪದಕವನ್ನು ಗೆದ್ದಿದ್ದು ಜಾಗತಿಕ ಮಟ್ಟದ ಟೂರ್ನಿಯಲ್ಲಿ ಸತತ 10ನೇ ಪ್ರಶಸ್ತಿ ಗೆದ್ದ ಮೊದಲ ಅಥ್ಲೀಟ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 
34 ವರ್ಷದ ಮೊಹಮ್ಮದ್ ಫರ್ಹಾ 2005ರಲ್ಲಿ ಮೊದಲ ಬಾರಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಅಲ್ಲಿಂದ ಅವರು ಓಟಕ್ಕೆ ಕೊನೆಯೇ ಇಲ್ಲ ತಾವು ಭಾಗವಹಿಸಿದ್ದ ಎಲ್ಲಾ ಓಟಗಳಲ್ಲಿಯೂ ಚಿನ್ನದ ಪದಕವನ್ನು ಗೆದ್ದು ಬೀಗಿದ್ದಾರೆ.  2012ರಲ್ಲಿ ಲಂಡನ್ ಸ್ಟೇಡಿಯಂನಲ್ಲಿ ನಡೆದ ಒಲಿಂಪಿಕ್ಸ್ ನ 10 ಸಾವಿರ ಮೀಟರ್ ಓಟದಲ್ಲೂ ಚಿನ್ನದ ಪದಕ ಗೆದ್ದಿದ್ದರು. 
ಮೊಹಮ್ಮದ್ ಫರ್ಹಾ ಶುಕ್ರವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 10 ಸಾವಿರ ಮೀ. ಓಟದಲ್ಲಿ 26 ನಿಮಿಷ 49.51 ಸೆಕೆಂಡ್ ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಈ ಮೂಲಕ ಬ್ರಿಟನ್ ನ ಶ್ರೇಷ್ಠ ದೂರ ಅಂತರದ ಓಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
ಚಾಂಪಿಯನ್ ಶಿಪ್ ನಲ್ಲಿ ಉಗಾಂಡದ ಯುವ ಓಟಗಾರ ಜೊಶುವಾ ಚೆಪ್ಟೆಗಿ(26:49.94) ಬೆಳ್ಳಿ ಪದಕವನ್ನು ಗೆದ್ದುಕೊಂಡರೆ ಕೀನ್ಯಾದ ಪಾಲ್ ಟನುಲ್(26:50.60) ಕಂಚು ಪದಕ ಗೆದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com