ಐಎಸ್ಎಸ್ಎಫ್ ವಿಶ್ವಕಪ್: ಶೂಟಿಂಗ್‍ನಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ ಜೀತು ರಾಯ್

ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡೆ ಫೆಡರೇಷನ್(ಐಎಸ್ಎಸ್ಎಫ್) ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಜೀತು ರಾಯ್ ಅವರು...
ಅಮನ್​ಪ್ರೀತ್ ಸಿಂಗ್ - ಜೀತು ರಾಯ್
ಅಮನ್​ಪ್ರೀತ್ ಸಿಂಗ್ - ಜೀತು ರಾಯ್
ನವದೆಹಲಿ: ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡೆ ಫೆಡರೇಷನ್(ಐಎಸ್ಎಸ್ಎಫ್) ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಜೀತು ರಾಯ್ ಅವರು 50 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಇಂದು ನಡೆದ ಫೈನಲ್​ನಲ್ಲಿ ಜೀತು ರಾಯ್ 230.1 ಅಂಕ ಕಲೆ ಹಾಕಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಹಳದಿ ಪದಕ ತಂದುಕೊಟ್ಟಿದ್ದಾರೆ. ಅಮನ್​ಪ್ರೀತ್ ಸಿಂಗ್ 226.9 ಅಂಕ ಗಳಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರೆ, ಇರಾನ್​ನ ವಾಹಿದ್ ಗೋಲ್ಕಂದನ್ 208.0 ಅಂಕ ಕಲೆಹಾಕಿ ಕಂಚಿನ ಪದಕ ಜಯಿಸಿದರು.
ಇನ್ನು ಇದೇ ಮೊದಲ ಬಾರಿಗೆ ಐಎಸ್ಎಸ್ಎಫ್ ವಿಶ್ವಕಪ್ ನಲ್ಲಿ ಮಿಶ್ರ ಡಬಲ್ಸ್ ಶೂಟಿಂಗ್ ಸ್ಪರ್ಧೆಯನ್ನು ಪರಿಚಯಿಸಲಾಗಿದ್ದು ಇದರಲ್ಲಿ ಜೀತು ರಾಯ್ ಮತ್ತು ಹೀನಾ ಸಿಧು ಚಿನ್ನದ ಪದಕ ಗೆದ್ದಿದ್ದಾರೆ.
ಈ ಮೊದಲು 2014ರಲ್ಲಿ ಮ್ಯೂನಿಚ್​ನಲ್ಲಿ ನಡೆದ ಐಎಸ್​ಎಸ್​ಎಫ್ ವಿಶ್ವಕಪ್​ನಲ್ಲಿ ಜೀತು ರಾಯ್ 10 ಮೀ.ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಅದೇ ವರ್ಷ ಮರಿಬಾರ್ ವಿಶ್ವಕಪ್ ಪಂದ್ಯಾವಳಿಯಲ್ಲಿ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಮತ್ತು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com