
ನವದೆಹಲಿ: 2ನೇ ಆವೃತ್ತಿಯ ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್ ನಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತ ಪಿವಿ ಸಿಂಧು ಸೈನಾ ನೆಹ್ವಾಲ್ ಒಳಗೊಂಡ ಅವಧ್ ವಾರಿಯರ್ಸ್ ತಂಡವನ್ನು ಮಣಿಸಿತು.
ಸಿರಿ ಪೋರ್ಟ್ ನಲ್ಲಿರುವ ಡಿಡಿಎ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ಸ್ಕ್ಯಾಷರ್ಸ್ ತಂಡ ಅವಧ್ ವಾರಿಯರ್ಸ್ ತಂಡವನ್ನು 4-1 ರಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.
ಇನ್ನು ನಿರ್ಣಾಯಕ ಟ್ರಂಪ್ ಮ್ಯಾಚ್ ನಲ್ಲಿ ಸೈನಾ ನೆಹ್ವಾಲ್ ರನ್ನು ಮಣಿಸುವ ಮೂಲಕ ಸಿಂಧು ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಚೆನ್ನೈ ತಂಡ ಹಾಲಿ ರನ್ನರ್ ಅಪ್ ಮುಂಬೈ ರ್ಯಾರೆಟ್ಸ್ ತಂಡವನ್ನು ಎದುರಿಸಲಿದೆ.
Advertisement