
ನವದೆಹಲಿ: 2ನೇ ಆವೃತ್ತಿಯ ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್ ನಲ್ಲಿ ಚೆನ್ನೈ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಚೆನ್ನೈ ಸ್ಮ್ಯಾಷರ್ಸ್ ಮತ್ತು ಮುಂಬೈ ರಾಕೆಟ್ ತಂಡಗಳ ಸಮಬಲದ ಪ್ರದರ್ಶನ ನೀಡಿದ್ದರಿಂದ ಪುರುಷರ ಸಿಂಗಲ್ಸ್ ಅಂತಿಮ ಕದನ ಫಲಿತಾಂಶ ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ಚೆನ್ನೈನ ತನಾಂಗ್ ಸಕ್ ಅವರು ಮುಂಬೈನ ರಾಕೆಟ್ ತಂಡದ ಅಜಯ್ ಜಯರಾಮ್ ವಿರುದ್ಧ 4-3 ಅಂತರದಿಂದ ಗೆದ್ದು ನೂತನ ಚಾಂಪಿಯನ್ ಆಗಿ ಹೊರಹೊಮ್ಮಿತು.
ದೆಹಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ ತಂಡದ ತನಾಂಗ್ ಸಕ್ 9-11, 11-7, 11-3ರಿಂದ ಅಜಯ್ ಜಯರಾಮ್ ಅವರನ್ನು ಮಣಿಸಿದರು.
Advertisement