
ನವದೆಹಲಿ: ಪ್ರೊ ಕುಸ್ತಿ ಲೀಗ್ 2ನೇ ಆವೃತ್ತಿಯಲ್ಲಿ ರಿಯೋ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಪೈಲ್ವಾನ್ ವ್ಯ್ವಾಡಿಮಿರ್ ಕಿಂಚೆಗಶ್ವಿಲಿ ಸಾರಥ್ಯದ ಪಂಜಾಬ್ ರಾಯಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಪಂದ್ಯದಲ್ಲಿ ಹಾಲಿ ರನ್ನರ್ ಅಪ್ ಹರಿಯಾಣ ಹಮ್ಮರ್ಸ್ ತಂಡ ಪಂಜಾಬ್ ತಂಡ 5-4 ಅಂತರದಿಂದ ಸೋಲಿಸಿ ಚೊಚ್ಚಲ ಪ್ರಶಸ್ತಿ ತಮ್ಮದಾಗಿಸಿಕೊಂಡಿತು. ಇನ್ನು ಕಳೆದ ಆವೃತ್ತಿಯಲ್ಲಿ ಹರಿಯಾಣ ತಂಡ ಮುಂಬೈ ಗರುಡ ತಂಡದ ಸೋಲುಕಂಡಿದ್ದು ಈ ಬಾರಿಯು ರನ್ನರ್ ಅಪ್ ಹಾಗೇ ಉಳಿದಿದೆ.
ಪಂಜಾಬ್ ಮತ್ತು ಹರಿಯಾಣ ಸಮಬಲದಲ್ಲಿದ್ದಾಗ ನಿರ್ಣಾಯಕವೆನಿಸಿದ ಪುರುಷರ 74 ಕೆಜಿ ವಿಭಾಗದಲ್ಲಿ ಸುಮಿತ್ ಸೆಹ್ರಾವತ್ 10-1 ರಿಂದ ಹರಿಯಾಣದ ಜಿತೇಂದ್ರ ವಿರುದ್ಧ ಪ್ರಚಂಡ ಗೆಲುವು ಕಾಣುವ ಮೂಲಕ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆಲ್ಲಿಸಿಕೊಟ್ಟರು.
Advertisement