ಶರವೇಗದ ಸರದಾರ ಉಸೇನ್ ಬೋಲ್ಟ್‌ರ ಒಲಿಂಪಿಕ್ಸ್ ಚಿನ್ನ ಹಿಂಪಡೆದ ಐಒಸಿ!

ಶರವೇಗದ ಸರದಾರ ಉಸೇನ್ ಬೋಲ್ಟ್ ತನ್ನ ಜಮೈಕಾ ರಿಲೇ ತಂಡದ ನೆಸ್ಟಾ ಕಾರ್ಟರ್ ಅವರು ಡೋಪಿಂಗ್ ನಲ್ಲಿ ಸಿಕ್ಕಿ ಬಿದ್ದಿರುವ ಹಿನ್ನೆಲೆಯಲ್ಲಿ ಒಂದು ಚಿನ್ನದ ಪದಕವನ್ನು ಉಸೇನ್...
ಉಸೇನ್ ಬೋಲ್ಟ್ ರಿಲೇ ತಂಡ
ಉಸೇನ್ ಬೋಲ್ಟ್ ರಿಲೇ ತಂಡ

ಶರವೇಗದ ಸರದಾರ ಉಸೇನ್ ಬೋಲ್ಟ್ ತನ್ನ ಜಮೈಕಾ ರಿಲೇ ತಂಡದ ನೆಸ್ಟಾ ಕಾರ್ಟರ್ ಅವರು ಡೋಪಿಂಗ್ ನಲ್ಲಿ ಸಿಕ್ಕಿ ಬಿದ್ದಿರುವ ಹಿನ್ನೆಲೆಯಲ್ಲಿ ಒಂದು ಚಿನ್ನದ ಪದಕವನ್ನು ಉಸೇನ್ ಬೋಲ್ಟ್ ಕಳೆದುಕೊಂಡಿದ್ದಾರೆ.

2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ 4X100 ರಿಲೇಯಲ್ಲಿ ಉಸೇನ್ ಬೋಲ್ಟ್ ತಂಡ ಚಿನ್ನದ ಪದಕ ಗೆದ್ದಿತ್ತು. ಬೀಜಿಂಗ್ ಒಲಿಂಪಿಕ್ಸ್ ವೇಳೆ ಪಡೆದಿರುವ ಸ್ಯಾಂಪಲ್ಸ್ ನ ವರದಿಯಲ್ಲಿ ನೆಸ್ಟಾ ಕಾರ್ಟರ್ ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನಲೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಬೋಲ್ಟ್ ತಂಡ ರಿಲೇಯಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ಹಿಂಪಡೆದಿದೆ. ಬೋಲ್ಟ್ ಅವರು ಬೀಜಿಂಗ್ ಒಲಿಂಪಿಕ್ಸ್ ನಲ್ಲಿ 100 ಮೀಟರ್, 200 ಮೀಟರ್ ಮತ್ತು 4X100 ಮೀಟರ್ ರಿಲೇಯಲ್ಲಿ ಚಿನ್ನ ಪದಕ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com