ಒಲಿಂಪಿಕ್ಸ್
ಒಲಿಂಪಿಕ್ಸ್

2024, 2028 ಒಲಿಂಪಿಕ್ಸ್‌ಗೆ ಪ್ಯಾರಿಸ್, ಲಾಸ್ ಏಂಜಲಿಸ್ ಆತಿಥ್ಯ

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) 2024 ಮತ್ತು 2028ರ ಒಲಿಂಪಿಕ್ಸ್ ಗೆ ಪ್ಯಾರಿಸ್ ಮತ್ತು ಲಾಸ್ ಏಂಜಲಿಸ್ ಆತಿಥ್ಯ ನೀಡಲು ಒಪ್ಪಿಕೊಂಡಿದೆ...
ಲಾಸನ್ನೆ(ಸ್ವಿಜರ್ಲೆಂಡ್): ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) 2024 ಮತ್ತು 2028ರ ಒಲಿಂಪಿಕ್ಸ್ ಗೆ ಪ್ಯಾರಿಸ್ ಮತ್ತು ಲಾಸ್ ಏಂಜಲಿಸ್ ಆತಿಥ್ಯ ನೀಡಲು ಒಪ್ಪಿಕೊಂಡಿದೆ. 
2024ರ ಒಲಿಂಪಿಕ್ಸ್ ಗೆ ಯಾರು ಆತಿಥ್ಯ ವಹಿಸಬೇಕು ಎಂಬುದರ ನಡುವೆ ಉಭಯ ನಗರಗಳ ನಡುವೆ ತೀವ್ರ ಪೈಪೋಟಿ ನಡೆದಿದ್ದು ಇದರಲ್ಲಿ ಸೋತ ತಂಡ ನಾಲ್ಕು ವರ್ಷಗಳ ನಂತರ ಒಲಿಂಪಿಕ್ಸ್ ಗೆ ಆತಿಥ್ಯ ವಹಿಸಲಿದೆ. ಈ ಬಗ್ಗೆ ಅಂತಿಮ ನಿರ್ಧಾರ ಆಗಸ್ಟ್ ನಲ್ಲಿ ಹೊರಬರಲಿದೆ. 
2024ರ ಒಲಿಂಪಿಕ್ಸ್ ಆತಿಥ್ಯಕ್ಕೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಫೇವರಟ್ ಎನಿಸಿದೆ. ಇತ್ತೀಚಿನ ದಿನಗಳಲ್ಲಿ ಒಲಿಂಪಿಕ್ಸ್ ದುಬಾರಿಯಾಗಿ ಪರಿಣಮಿಸಿದ್ದ ಪ್ಯಾರಿಸ್ ಮತ್ತು ಲಾಸ್ ಏಂಜಲಿಸ್ ಹಾಲಿ ಇರುವ ವ್ಯವಸ್ಥೆಗಳನ್ನೇ ಬಳಸಿಕೊಂಡು ಗೇಮ್ಸ್ ಸಂಘಟಿಸಲು ಮುಂದಾಗಿರುವುದು ಐಒಸಿ ಉಭಯ ನಗರಗಳಿಗೂ ಅವಕಾಶ ಕಲ್ಪಿಸಿಕೊಡುವ ನಿರ್ಧಾರಕ್ಕೆ ಕಾರಣವಾಗಿದೆ. 
ಪ್ಯಾರಿಸ್ ಈ ಮುನ್ನ 1900 ಮತ್ತು 1924ರ ಒಲಿಂಪಿಕ್ಸ್ ಆತಿಥ್ಯ ವಹಿಸಿಕೊಂಡಿತ್ತು. ಲಾಸ್ ಏಂಜಲೀಸ್ 1932 ಮತ್ತು 1984ರಲ್ಲಿ ಒಲಿಂಪಿಕ್ಸ್ ಆತಿಥ್ಯ ವಹಿಸಿಕೊಂಡಿತ್ತು. 

Related Stories

No stories found.

Advertisement

X
Kannada Prabha
www.kannadaprabha.com