ಉದ್ದೀಪನಾ ಪರೀಕ್ಷೆಯಲ್ಲಿ ಮನ್ ಪ್ರೀತ್ ಕೌರ್ ಫೇಲ್, ಚಿನ್ನದ ಪದಕ ಕಳೆದುಕೊಳ್ಳುವ ಸಾಧ್ಯತೆ

ಇತ್ತೀಚಿಗಷ್ಟೆ ಮುಕ್ತಾಯಗೊಂಡ 22ನೇ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌‍ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ....
ಮನ್ ಪ್ರೀತ್ ಕೌರ್
ಮನ್ ಪ್ರೀತ್ ಕೌರ್
ನವದೆಹಲಿ: ಇತ್ತೀಚಿಗಷ್ಟೆ ಮುಕ್ತಾಯಗೊಂಡ 22ನೇ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌‍ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಪ್ರಮುಖ ಶಾಟ್‍ಪುಟ್ ಕ್ರೀಡಾಪಟು ಮನ್‍ಪ್ರೀತ್ ಕೌರ್ ಅವರು ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.
ಜೂನ್ 1ರಂದು ಪಟಿಯಾಲಾದಲ್ಲಿ ನಡೆದ ಫೆಡರೇಷನ್ ಕಪ್ ರಾಷ್ಟ್ರೀಯ ಕ್ರೀಡಾಕೂಟದ ವೇಳೆ ಉದ್ದೀಪನಾ ಮದ್ದು ಸೇವನೆ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಮನ್‍ಪ್ರೀತ್ ಅವರು ಡೈಮಿಥೈಲ್‍ಬುಟಲಾಮೈನ್ ಎಂಬ ಔಷಧಿ ಸೇವನೆ ಮಾಡಿರುವುದು ಪತ್ತೆಯಾಗಿತ್ತು. ನಾಡಾ ಸಂಹಿತೆಯಲ್ಲಿ ಈ ನಿರ್ದಿಷ್ಟ ನಿಷೇಧಿತ ಔಷಧಿಯನ್ನು ನಮೂದಿಸದೇ ಇದ್ದ ಕಾರಣ ಸದ್ಯ ಕೌರ್ ಅವರು ಅಮಾನತು ಶಿಕ್ಷೆಯಿಂದ ಪಾರಾಗಿದ್ದಾರೆ. ಆದರೆ ಮನ್‍ಪ್ರೀತ್ ಚಿನ್ನದ ಪದಕ ಕಳೆದುಕೊಳ್ಳುವ ಸಾಧ್ಯತೆ ಇದೆ.
ಒಂದು ವೇಳೆ ಬಿ ಸ್ಯಾಂಪಲ್ ಪರೀಕ್ಷೆಯಲ್ಲಿಯೂ ಕೌರ್ ಉದ್ದೀಪನಾ ಮದ್ದು ಸೇವಿಸಿದ್ದಾರೆ ಎಂದು ಸಾಬೀತಾದರೆ, ಈಗ ಗೆದ್ದಿರುವ ಚಿನ್ನದ ಪದಕವನ್ನು ಕಳೆದುಕೊಳ್ಳಬೇಕಾಗುತ್ತದೆ.
ಫೆಡರೇಷನ್ ಕಪ್ ಕ್ರೀಡಾಕೂಟದ ವೇಳೆ ನಡೆಸಿದ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಮನ್‍ಪ್ರೀತ್ ಅವರ ಮೂತ್ರದಲ್ಲಿ  ಡೈಮಿಥೈಲ್‍ಬುಟಲಾಮೈನ್ ಪತ್ತೆಯಾಗಿದೆ, ಈ ಬಗ್ಗೆ ಕಳೆದ  ರಾತ್ರಿ  ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ(ನಾಡಾ)ಕ್ಕೆ ಸೂಚನೆ ನೀಡಿದ್ದೇವೆ ಎಂದು ಅಥ್ಲಿಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧಿಕಾರಿಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com