ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಶ್ರೀಕಾಂತ್‌ಗೆ ಮಹೀಂದ್ರ ಟಿಯುವಿ-300 ಕಾರು ಉಡುಗೊರೆ

ಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್ ಗೆದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿಂದಬಿ ಶ್ರೀಕಾಂತ್ ಗೆ ಮಹೀಂದ್ರ ಗೂಪ್ ನ ಮುಖ್ಯಸ್ಥ ಆನಂದ್ ಮಹೀಂದ್ರ...
ಮಹೀಂದ್ರ ಟಿಯುವಿ 300 ಕಾರು-ಕಿದಂಬಿ ಶ್ರೀಕಾಂತ್
ಮಹೀಂದ್ರ ಟಿಯುವಿ 300 ಕಾರು-ಕಿದಂಬಿ ಶ್ರೀಕಾಂತ್
ಚೆನ್ನೈ: ಆಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್ ಗೆದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿಂದಬಿ ಶ್ರೀಕಾಂತ್ ಗೆ ಮಹೀಂದ್ರ ಗೂಪ್ ನ ಮುಖ್ಯಸ್ಥ ಆನಂದ್ ಮಹೀಂದ್ರ ಅವರು ಟಿಯುವಿ 300 ಕಾರನ್ನು ಉಡುಗೊರೆಯಾಗಿ ನೀಡಲು ತೀರ್ಮಾನಿಸಿದ್ದಾರೆ. 
ಟ್ವೀಟರಿಗರೊಬ್ಬರು ಶ್ರೀಕಾಂತ್ ಆಸ್ಟ್ರೇಲಿಯಾ ಓಪನ್ ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದಕ್ಕೆ ಬ್ಯಾಡ್ಮಿಂಟನ್ ಅಸೋಷಿಯೇಷನ್ ಆಫ್ ಇಂಡಿಯಾ ಸಂಸ್ಥೆ 5 ಲಕ್ಷ ನಗದು ಬಹುಮಾನ ಘೋಷಣೆ ಮಾಡಿದೆ. ಕ್ರಿಕೆಟ್ ಗೆ ಹೋಲಿಸಿದರೆ ಇದು ಯಾವ ಬಹುಮಾನ ಇದಕ್ಕೆ ನೀವೇ ಏನಾದರೂ ಮಾಡಬೇಕು ಎಂದು ಆನಂದ್ ಮಹೀಂದ್ರ ಅವರಿಗೆ ಟ್ವೀಟ್ ಮಾಡಿದ್ದರು. 
ಈ ಟ್ವೀಟ್ ಗೆ ಸ್ಪಂದಿಸಿದ ಆನಂದ್ ಮಹೀಂದ್ರ ಅವರು ಶ್ರೀಕಾಂತ್ ಗೆ ಮಹೇಂದ್ರ ಟಿಯುವಿ 300 ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಇದನ್ನು ಸ್ವತಃ ತಮ್ಮ ಕೈಹಿಂದಲೇ ಶ್ರೀಕಾಂತ್ ಅವರಿಗೆ ನೀಡುವುದಾಗಿ ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
ಶ್ರೀಕಾಂತ್ ಅವರು ಇಂಡೊನೇಷ್ಯಾ ಓಪನ್ ಮತ್ತು ಆಸ್ಟ್ರೇಲಿಯಾ ಓಪನ್ ಸೀರಿಸ್ ಬ್ಯಾಕ್ ಟು ಬ್ಯಾಕ್ ಗೆದ್ದ ಭಾರತದ ಮೊದಲ ಪುರುಷ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com