ನವದೆಹಲಿ: ಸತತ ಎರಡು ಸೂಪರ್ ಸೀರಿಸ್ ಗೆಲ್ಲುವ ಮೂಲಕ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಕಿದಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಟಾಪ್ 10 ರ್ಯಾಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದ್ದಾರೆ.
24 ವರ್ಷದ ಕಿದಂಬಿ ಶ್ರೀಕಾಂತ್ ಇಂಡೊನೇಷ್ಯಾ ಓಪನ್ ಮತ್ತು ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗುವ ಮೂಲಕ 58,583 ಅಂಗ ಗಳಿಸುವ ಮೂಲಕ 11ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಇನ್ನ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಸಾಯಿ ಪ್ರಣೀತ್ 15ನೇ ಸ್ಥಾನ ಮತ್ತು ಅಜಯೇ ಜಯರಾಮ್ 16ನೇ ಸ್ಥಾನದಲ್ಲಿದ್ದಾರೆ.
ಮಹಿಳಾ ಸಿಂಗಲ್ಸ್ ನಲ್ಲಿ ಪಿವಿ ಸಿಂಧು ಒಂದು ಸ್ಥಾನ ಕಳೆದುಕೊಂಡು 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇನ್ನು ಸೈನಾ ನೆಹ್ವಾಲ್ ಒಂದು ಸ್ಥಾನ ಮೇಲಕ್ಕೇರಿದ್ದು 15ನೇ ಸ್ಥಾನದಲ್ಲಿದ್ದಾರೆ.