ಕೈ-ಕಾಲಿಗೆ ಹಗ್ಗ ಕಟ್ಟಿಕೊಂಡು 5 ಕಿ.ಮೀ ಈಜಿದ ಕಾಲೇಜು ವಿದ್ಯಾರ್ಥಿ!

ಕೈ-ಕಾಲಿಗೆ ಹಗ್ಗ ಕಟ್ಟಿಕೊಂಡು ಬರೋಬ್ಬರಿ 5 ಕಿ.ಮೀ ಈಜುವ ಮೂಲಕ ಕಾಲೇಜು ವಿದ್ಯಾರ್ಥಿಯೊಬ್ಬ ಗಿನ್ನಿಸ್ ದಾಖಲೆ ಬರೆಯುವ ಸನಿಹದಲ್ಲಿದ್ದಾನೆ...
ಶಬರಿನಾಥನ್
ಶಬರಿನಾಥನ್
ನಾಗಪಟ್ಟಿಣಂ (ತಮಿಳುನಾಡು): ಕೈ-ಕಾಲಿಗೆ ಹಗ್ಗ ಕಟ್ಟಿಕೊಂಡು ಬರೋಬ್ಬರಿ 5 ಕಿ.ಮೀ ಈಜುವ ಮೂಲಕ ಕಾಲೇಜು ವಿದ್ಯಾರ್ಥಿಯೊಬ್ಬ ಗಿನ್ನಿಸ್ ದಾಖಲೆ ಬರೆಯುವ ಸನಿಹದಲ್ಲಿದ್ದಾನೆ. 
ಕಾಲೇಜು ವಿದ್ಯಾರ್ಥಿ 19 ವರ್ಷದ ಶಬರಿನಾಥನ್ ಬಂಗಾಳ ಕೊಲ್ಲಿ ಸಮುದ್ರ ತೀರದಲ್ಲಿ 2 ಗಂಟೆ, 20 ನಿಮಿಷ 48 ಸೆಕೆಂಡ್ ಗಳಲ್ಲಿ ಕ್ರಮಿಸಿದ ಎಂದು ಜಿಲ್ಲಾ ಕ್ರೀಡಾಧಿಕಾರಿ ತಿಳಿಸಿದ್ದಾರೆ. 
ಈ ಸಾಧನೆಯ ವಿವರವನ್ನು ಗಿನ್ನಿಸ್ ಸಮಿತಿಗೆ ಕಳುಹಿಸಲಾಗಿದ್ದು ದಾಖಲೆ ಇನ್ನಷ್ಟೆ ಖಚಿತವಾಗಬೇಕಿದೆ. ಈ ದಾಖಲೆ ಸದ್ಯ 37 ವರ್ಷದ ಗೋಪಾಲ್ ಖಾರ್ವಿ ಅವರ ಹೆಸರಿನಲ್ಲಿದೆ. 2013ರಲ್ಲಿ 3.07 ಕಿ,ಮೀ ದೂರವನ್ನು ಕೈ ಮತ್ತು ಕಾಲಿಗೆ ಹಗ್ಗ ಬಿಗಿದು 2 ಗಂಟೆ 43 ನಿಮಿಷದಲ್ಲಿ ಮಲ್ಪೆ ತೀರದಲ್ಲಿ ಈಜಿ ಗಿನ್ನಿಸ್ ದಾಖಲೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com