ಮುಂದಿನ ಅಕ್ಟೋಬರ್ 28ರಂದು ಫೀಫಾ ಅಂಡರ್ 17 ವಿಶ್ವಕಪ್ ನ ಕೊನೆಯ ಪಂದ್ಯ ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಅಂಡರ್ 17 ಫೀಫಾ ವಿಶ್ವಕಪ್ ನ ಸೆಮಿ ಫೈನಲ್ ಪಂದ್ಯಗಳು ನವಿ ಮುಂಬೈ ಹಾಗೂ ಗುವಾಹಟಿಯಲ್ಲಿ ನಡೆಯಲಿದೆ. ಪಂದ್ಯವನ್ನಾಡಲು ಭಾರತದಾದ್ಯಂತ 6 ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಫೀಫಾ ಮತ್ತು ಸ್ಥಳೀಯ ಆಯೋಜಕ ಸಮಿತಿ ಪಂದ್ಯಗಳ ದಿನಾಂಕಗಳನ್ನು ಘೋಷಿಸಿದೆ.