ಏಷ್ಯಾ ಚಾಂಪಿಯನ್ ಷಿಪ್: ಶಿವ ತಾಪ, ಸುಮಿತ್ ಫೈನಲ್ ಗೆ, ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡ ವಿಕಾಸ್ ಕೃಷ್ಣನ್

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ 60 ಕೆಜಿ ವಿಭಾಗದಲ್ಲಿ ನಾಲ್ಕನೇ ಶ್ರೇಯಾಂಕಿತ ಶಿವ ತಾಪ...
ಶಿವ ತಾಪ
ಶಿವ ತಾಪ
ತಾಷ್ಕೆಂಟ್: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ 60 ಕೆಜಿ ವಿಭಾಗದಲ್ಲಿ ನಾಲ್ಕನೇ ಶ್ರೇಯಾಂಕಿತ ಶಿವ ತಾಪ ಮತ್ತು 91 ಕೆಜಿ ವಿಭಾಗದಲ್ಲಿ ಸುಮಿತ್ ಸಂಗ್ ವಾನ್ ಎದುರಾಳಿಗಳಿಗೆ ಪ್ರಭಾವಶಾಲಿ ಸ್ಪರ್ಧೆಯೊಡ್ಡಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.
ಮಂಗೋಲಿಯಾದ ಅಗ್ರ ಶ್ರೇಯಾಂಕಿತ ಒಲಂಪಿಕ್ ಕಂಚಿನ ಪದಕ ವಿಜೇತ ದೊರ್ಜ್ ನ್ಯಾಂಬೂಗ್ ಒಟ್ಗೊಂಡಲೈ ಅವರನ್ನು ಮಣಿಸಿದ್ದು, ಸುಮಿತ್ ಎರಡನೇ ಶ್ರೇಯಾಂಕಿತ ಆಟಗಾರ ತಾಜಿಕ್ ಜಕ್ಹೊನ್ ಖರ್ಬೊನೊವ್ ಅವರನ್ನು ಸೆಮಿ ಫೈನಲ್ ನಲ್ಲಿ ಸೋಲಿಸಿದರು.
ಅದಾಗ್ಯೂ 75 ಕೆಜಿಯ ಮಧ್ಯಮ ತೂಕದ ಆಟದಲ್ಲಿ ಅಗ್ರ ಶ್ರೇಯಾಂಕಿತ ವಿಕಾಸ್ ಕೃಷ್ಣನ್ ದಕ್ಷಿಣ ಕೊರಿಯಾದ ಲೀ ದೊಂಗ್ ಯುನ್ ಅವರ ವಿರುದ್ಧ ಸೆಮಿ ಫೈನಲ್ ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಇಂದಿನ ವೈವ್ ಇನ್ ನಲ್ಲಿ ವಿಕಾಸ್ ಕೃಷ್ಣನ್ ಇರಲಿಲ್ಲ. ಹಾಗಾಗಿ ದಕ್ಷಿಣ ಕೊರಿಯಾ ಆಟಗಾರ ಅಂತಿಮ ಸುತ್ತಿಗೆ ಹೋದರು. ವಿಕಾಸ್ ಕೃಷ್ಣನ್ ಏಕೆ ಇರಲಿಲ್ಲ ಎಂಬುದು ಗೊತ್ತಾಗಿಲ್ಲ ಎಂದು ಏಷ್ಯನ್ ಬಾಕ್ಸಿಂಗ್ ಒಕ್ಕೂಟ ಅಧಿಕಾರಿಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com