ಎಫ್ಐಎ ಗೆ ಭಾರತದ ಉನ್ನತ ಪ್ರತಿನಿಧಿಯಾಗಿ ವಿಜಯ್ ಮಲ್ಯ ಮುಂದುವರಿಕೆ!

ಬ್ಯಾಂಕ್ ಗಳಿಗೆ ಪಾವತಿ ಮಾಡಬೇಕಿರುವ ಸುಸ್ತಿದಾರ ವಿಜಯ್ ಮಲ್ಯ ವಿಶ್ವ ಮೋಟಾರ್ ಸ್ಪೋರ್ಟ್ ಸಂಸ್ಥೆ ಎಫ್ಐಎ ಗೆ ಭಾರತದ ಉನ್ನತ ಪ್ರತಿನಿಧಿಯಾಗಿ ಮುಂದುವರೆಯಲಿದ್ದಾರೆ.
ವಿಜಯ್ ಮಲ್ಯ
ವಿಜಯ್ ಮಲ್ಯ
ನವದೆಹಲಿ: ಬ್ಯಾಂಕ್ ಗಳಿಗೆ ಪಾವತಿ ಮಾಡಬೇಕಿರುವ ಸುಸ್ತಿದಾರ ವಿಜಯ್ ಮಲ್ಯ ವಿಶ್ವ ಮೋಟಾರ್ ಸ್ಪೋರ್ಟ್ ಸಂಸ್ಥೆ ಎಫ್ಐಎ ಗೆ ಭಾರತದ ಉನ್ನತ ಪ್ರತಿನಿಧಿಯಾಗಿ ಮುಂದುವರೆಯಲಿದ್ದಾರೆ. 
ಭಾರತೀಯ ಮೋಟಾರ್ ಸ್ಪೋರ್ಟ್ ನ ಸಂಸ್ಥೆ ಎಫ್ಎಂಎಸ್ ಸಿಐ ಮಲ್ಯ ಅವರ ಹೆಸರನ್ನು ಗೌರವಾಧ್ಯಕ್ಷ ಪಟ್ಟಿಯಿಂದ ಕೈಬಿಟ್ಟಿದ್ದರೆ, ವಿಶ್ವ ಸ್ಪೋರ್ಟ್ ಸಂಸ್ಥೆಯಲ್ಲಿ ತನ್ನ ಪ್ರಾತಿನಿಧ್ಯ ವಿಷಯದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ತಿಳಿಸಿದೆ. 
ಎಫ್ಐಎಂ ದ್ವಿಚಕ್ರ ವಾಹನಗಳ ರೇಸ್ ನ ಆಡಳಿತ ಮಂಡಳಿಯಾದರೆ, ಎಫ್ಐಎ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕಾರ್ ರೇಸಿಂಗ್ ನ ಆಡಳಿತ ಮಂಡಳಿಯಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಪ್ರತಿನಿಧಿಗಳು ಬದಲಾವಣೆಯಾಗಲಿದ್ದು, 2018 ರ ನಂತರ ಹೊಸ ಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದಾಗಿದೆ. " ಒಂದು ವೇಳೆ ಈಗ ಮಲ್ಯ ಅವರನ್ನು ಪ್ರತಿನಿಧಿ ಸ್ಥಾನದಿಂದ ವಜಾಗೊಳಿಸಿದರೆ ವಿಶ್ವ ಮೋಟಾರ್ ಸ್ಪೋರ್ಟ್ ಕೌನ್ಸಿಲ್ ನಲ್ಲಿ ಭಾರತ ತನ್ನ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಫ್ಎಂಎಸ್ ಸಿಐ ಅಧ್ಯಕ್ಷ ಅಕ್ಬರ್ ಇಬ್ರಾಹಿಂ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com