ಮೇಲ್ಮನವಿ ಅರ್ಜಿ ವಜಾ: ಲಿಯೋನಲ್ ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ ಖಾಯಂ

ತೆರಿಗೆ ವಂಚನೆ ಪ್ರಕರಣ ಸಂಬಂಧ ಸ್ಪ್ಯಾನಿಷ್ ಕೋರ್ಟ್ ನೀಡಿದ್ದ 21 ತಿಂಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾ ಪಟು...
ಲಿಯೋನಲ್ ಮೆಸ್ಸಿ
ಲಿಯೋನಲ್ ಮೆಸ್ಸಿ
ಮ್ಯಾಡ್ರೀಡ್: ತೆರಿಗೆ ವಂಚನೆ ಪ್ರಕರಣ ಸಂಬಂಧ ಸ್ಪ್ಯಾನಿಷ್ ಕೋರ್ಟ್ ನೀಡಿದ್ದ 21 ತಿಂಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾ ಪಟು ಅರ್ಜೈಂಟಿನಾ ಹಾಗೂ ಬಾರ್ಸಿಲೋನಾ ತಂಡದ ಪುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಮನವಿಯನ್ನು ಸ್ಪೇನ್ ಸುಪ್ರೀಂಕೋರ್ಟ್ ತಿರಸ್ಕರಿಸಿದೆ. 
ಮೆಸ್ಸಿ ಮೇಲ್ಮನವಿಯನ್ನು ಸ್ಪೇನ್ ಸುಪ್ರೀಂಕೋರ್ಟ್ ತಿರಸ್ಕರಿಸಿರುವುದರಿಂದ ಲಿಯೋನಲ್ ಮೆಸ್ಸಿ ಹಾಗೂ ಆತನ ತಂದೆ ಜಾರ್ಜ್ ಹಾರ್ಸಿಯೊ ಮೆಸ್ಸಿ 21 ತಿಂಗಳ ಸೆರೆಮನೆ ವಾಸ ಅನುಭವಿಸಬೇಕಿದೆ. ಜತೆಗೆ ಮೆಸ್ಸಿ 15 ಕೋಟಿ ಹಾಗೂ ತಂದೆ 11 ಕೋಟಿ ದಂಡ ಕಟ್ಟಬೇಕಿದೆ. 
ಸ್ಪ್ಯಾನಿಷ್ ಕಾನೂನು ಪ್ರಕಾರ, 2 ವರ್ಷಕ್ಕಿಂತ ಕಡಿಮೆ ಅವಧಿಗೆ ಜೈಲು ಶಿಕ್ಷೆಯಾದರೆ ಅಂತಹ ಅಪರಾಧಿ ಜೈಲಿನಲ್ಲಿ ಶಿಕ್ಷೆ ಅನುಭವಿಸುವುದಕ್ಕೆ ಬದಲಾಗಿ ಮನೆಯಲ್ಲೇ ಇರಬಹುದಾಗಿದ್ದು ಮೇಲ್ವಿಚಾರಕರೊಬ್ಬರು ಅವರನ್ನು ಗಮನಿಸಲಿದ್ದಾರೆ.
ಲಿಯೋನಲ್ ಮೆಸ್ಸಿ ಹಾಗೂ ಆತನ ತಂದೆ ಜಾರ್ಜ್ ಹಾರ್ಸಿಯೋ ಮೆಸ್ಸಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಬೆಲಿಜ್ ಹಾಗೂ ಉರುಗ್ವೆಯಲ್ಲಿ ನಕಲಿ ಕಂಪನಿಗಳು ತೆರೆದಿದ್ದು, ತಂದೆ-ಮಗ ಇಬ್ಬರು 4.6 ಮಿಲಿಯನ್ ಡಾಲರ್ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com