ರೋಹಿತ್ ಯಾದವ್
ರೋಹಿತ್ ಯಾದವ್

ಉದ್ದೀಪನ ಮದ್ದು ಸೇವನೆ: ಜಾವೆಲಿನ್ ಥ್ರೋ ಆಟಗಾರ ರೋಹಿತ್ ಯಾದವ್ ತಾತ್ಕಾಲಿಕ ಅಮಾನತು

ಉದ್ದೀಪನ ಮದ್ದು ನಿಗ್ರಹ ದಳ(ನಾಡಾ) ನಡೆಸಿದ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲ...
ನವದೆಹಲಿ: ಉದ್ದೀಪನ ಮದ್ದು ನಿಗ್ರಹ ದಳ(ನಾಡಾ) ನಡೆಸಿದ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲವಾಗಿದ್ದರಿಂದ ಜಾವೆಲಿನ್ ಥ್ರೋವರ್ ರೋಹಿತ್ ಯಾದವ್ ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ನಿಷೇಧಿತ ಸ್ಟನೊಝೊಲೊಲ್ ನ್ನು 16 ವರ್ಷದ ರೋಹಿತ್ ಯಾದವ್ ಸೇವಿಸಿದ್ದರು ಎಂದು ಎ ಸ್ಯಾಂಪಲ್ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ನಾಡಾ ಉದ್ದೀಪನ ಔಷಧ ಸೇವನೆಯ ಪರೀಕ್ಷೆಯನ್ನು ಹೈದರಾಬಾದಿನಲ್ಲಿ ಕಳೆದ ತಿಂಗಳು 14ನೇ ರಾಷ್ಟ್ರೀಯ ಯುವ ಚಾಂಪಿಯನ್ ಷಿಪ್ ವೇಳೆ ನಡೆಸಲಾಗಿತ್ತು. ಅಲ್ಲಿ ರೋಹಿತ್ ವೈಯಕ್ತಿಕ ಸುತ್ತಿನಲ್ಲಿ 76.11 ಮೀಟರ್ ಮಾಟರ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದರು.
ಬ್ಯಾಂಕಾಕ್ ನಲ್ಲಿ ನಡೆದ ಎರಡನೇ ಏಷ್ಯಾ ಯುವ ಅಥ್ಲೆಟಿಕ್ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ರೋಹಿತ್ ಮುಂದಿನ ವಾರದೊಳಗೆ ದೃಢೀಕರಣ 'ಬಿ' ಮಾದರಿ ಪರೀಕ್ಷೆಗೊಳಪಡಬೇಕಾಗಿದೆ.
ಉತ್ತರ ಪ್ರದೇಶದ ಜೌನ್ಪುರ್ ಮೂಲದ ಆಟಗಾರ ರೋಹಿತ್, ನಾಡಾದ ಶಿಸ್ತುಪಾಲನಾ ಸಮಿತಿ ಮುಂದೆ ಹಾಜರಾಗಿ ತಾವು ನಿರಪರಾಧಿ ಎಂಬುದನ್ನು ಸಾಬೀತುಪಡಿಸಬೇಕಿದೆ.
ನಿಷೇಧಿತ ಉದ್ದೀಪನ ಮದ್ದು ಸೇವಿಸಿದ ಆರೋಪದ ಹಿನ್ನೆಲೆಯಲ್ಲಿ ಭಾರತದ ವೈಟ್ ಲಿಫ್ಟರ್ ಸುಶೀಲಾ ಪನ್ವರ್ ಅವರನ್ನು ಕೂಡ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. 

Related Stories

No stories found.

Advertisement

X
Kannada Prabha
www.kannadaprabha.com