ಸೈನಾ, ಪ್ರಣಯ್ ಪರಾಭವ; ಚೀನಾ ಓಪನ್ ನಿಂದ ಹೊರಕ್ಕೆ

ಭಾರತದ ಸೈನಾ ನೆಹ್ವಾಲ್, ಚೀನಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಪಾನ್ ನ ಐದನೇ ಶ್ರೇಯಾಂಕಿತ ಅಕನೆ ಯಮಾಗುಚಿ ವಿರುದ್ಧ ಸೆಣೆಸಾಟದಲ್ಲಿ ಸೋತು ಹಿಮ್ಮೆಟ್ಟಿದ್ದಾರೆ.
ಚೀನಾ ಓಪನ್: ಸೈನಾ, ಪ್ರಣಯ್ ಪರಾಭವ, ಪುರುಷರ ವಿಭಾಗದಲ್ಲಿ ಭಾರತದ ಸವಾಲು ಅಂತ್ಯ
ಚೀನಾ ಓಪನ್: ಸೈನಾ, ಪ್ರಣಯ್ ಪರಾಭವ, ಪುರುಷರ ವಿಭಾಗದಲ್ಲಿ ಭಾರತದ ಸವಾಲು ಅಂತ್ಯ
ಫುಝೌ: ಭಾರತದ ಸೈನಾ ನೆಹ್ವಾಲ್, ಚೀನಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಪಾನ್ ನ ಐದನೇ ಶ್ರೇಯಾಂಕಿತ ಅಕನೆ ಯಮಾಗುಚಿ ವಿರುದ್ಧ ಸೆಣೆಸಾಟದಲ್ಲಿ ಸೋತು ಹಿಮ್ಮೆಟ್ಟಿದ್ದಾರೆ. ಈ ಮೂಲಕ  ಭಾರತೀಯ ಅಭಿಮಾನಿಗಳಿಗೆ ತೀವ್ರ ನಿರಾಶೆ ಉಂಟುಮಾಡಿದ್ದಾರೆ.
ಲಂಡನ್ ಒಲಂಪಿಕ್ ನಲ್ಲಿ ಕಂಚಿನ ಪದಕ ಗೆದ್ದ ಸೈನಾ ಅವರು ಚೀನಾ ಓಪನ್ ಎರಡನೇ ಸುತ್ತಿನಲ್ಲಿ  ಯಮಾಗುಚಿ ವಿರುದ್ಧ 18-21, 11-21 ಸೆಟ್ ಗಳಿಂದ ಪರಾಭವ ಅನುಭವಿಸಿದರು. 
ಇದೇ ವೇಳೆ ಪುರುಷರ ವಿಭಾಗದಲ್ಲಿ ಭಾರತದ ಎಚ್.ಎಸ್. ಪ್ರಣಯ್ ಸಹ ಹಾಂಗ್ ಕಾಂಗ್ ನ ಲೀ ಚೆಕ್ ಯಿಯು ವಿರುದ್ಧದ ಪಂದ್ಯದಲ್ಲಿ ಪರಾಜಿತರಾಗಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಯಿಯು ವಿರುದ್ಧ  ಸೆಣೆಸಿದ್ದ ಪ್ರಣಯ್ 19-21, 17-21 ಸೆಟ್ ನಿಂದ ಪರಾಭವಗೊಂಡರು. ಪ್ರಣಯ್ ಸೋಲಿನೊಂದಿಗೆ ಚೀನಾ ಓಪನ್ ನಲ್ಲಿ ಭಾರತೀಯ ಪುರುಷರ ಅಭಿಯಾನ ಕೊನೆಗೊಂಡಿದೆ.
ಇದೀಗ ಭಾರತದ ಇನ್ನೋರ್ವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮಾತ್ರವೇ ಚೀನಾ ಓಪನ್ ಸೀರೀಸ್ ನಲ್ಲಿ ಭಾರತೀಯರ ಭರವಸೆಯಾಗಿದ್ದಾರೆ. ಸಿಂಧು ಅವರು ತಮ್ಮ ಕ್ವಾರ್ಟರ್ ಫೈನಲ್ಸ್ ಸುತ್ತಿನಲ್ಲಿ ಚೀನಾದ ಹದಿನೇಳದ ಹರೆಯದ ಯು ಹ್ಯಾನ್ ಅವರನ್ನು ಎದುರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com