ಭಾರತೀಯ ಬಾಕ್ಸಿಂಗ್ ನ ರಾಷ್ಟ್ರೀಯ ವೀಕ್ಷಕ ಹುದ್ದೆಗೆ ಮೇರಿ ಕೋಮ್ ರಾಜಿನಾಮೆ

ಸಕ್ರಿಯ ಕ್ರೀಡಾಪಟುಗಳು ಹುದ್ದೆಯನ್ನು ಹೊಂದಿರಬಾರದು ಮತ್ತು ಆ ಹುದ್ದೆಗೆ ಸಕ್ರಿಯ ಕ್ರೀಡಾಪಟುಗಳನ್ನು ಪರಿಗಣಿಸುವಂತಿಲ್ಲ....
ಎಂ.ಸಿ.ಮೇರಿ ಕೋಮ್
ಎಂ.ಸಿ.ಮೇರಿ ಕೋಮ್
ನವದೆಹಲಿ: ಸಕ್ರಿಯ ಕ್ರೀಡಾಪಟುಗಳು ಹುದ್ದೆಯನ್ನು ಹೊಂದಿರಬಾರದು ಮತ್ತು ಆ ಹುದ್ದೆಗೆ ಸಕ್ರಿಯ ಕ್ರೀಡಾಪಟುಗಳನ್ನು ಪರಿಗಣಿಸುವಂತಿಲ್ಲ ಎಂದು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ ನಂತರ ಭಾರತೀಯ ಬಾಕ್ಸಿಂಗ್ ನ ರಾಷ್ಟ್ರೀಯ ವೀಕ್ಷಕ ಹುದ್ದೆಗೆ ಐದು ಬಾರಿ ಚಾಂಪಿಯನ್ ಆಗಿರುವ ಎಂಸಿ ಮೇರಿ ಕೋಮ್ ರಾಜಿನಾಮೆ ನೀಡಿದ್ದಾರೆ.
ನಾನು ರಾಷ್ಟ್ರೀಯ ವೀಕ್ಷಕ ಹುದ್ದೆಗೆ 10 ದಿನಗಳ ಹಿಂದೆ ರಾಜಿನಾಮೆ ನೀಡಿದ್ದೇನೆ. ಆ ಸ್ಥಾನವನ್ನು ಪಡೆದುಕೊಳ್ಳಲು ನಾನು ಮನವಿ ಮಾಡಿಕೊಂಡಿದ್ದೆ, ಆದರೆ ನಾನು ಕೇಳಿದ್ದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಮೇರಿ ಕೋಮ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭಾರತೀಯ ಬಾಕ್ಸಿಂಗ್ ನ ವೀಕ್ಷಕ ಹುದ್ದೆಯ ಪ್ರಸ್ತಾಪ ಬಂದಾಗ ಅಂದಿನ ಕ್ರೀಡಾ ಕಾರ್ಯದರ್ಶಿ ಇಂಜೆಟಿ ಶ್ರೀನಿವಾಸ್ ಅವರಲ್ಲಿ ವಿಚಾರಿಸಿದ್ದೆ. ಸಕ್ರಿಯ ಕ್ರೀಡಾಪಟುಗಳು ಹುದ್ದೆಯನ್ನು ಹೊಂದಬಹುದೇ ಎಂದು ಕೂಡ ಕೇಳಿದ್ದೆ. ಆದರೂ ಕೂಡ ನನಗೆ ಆ ಸ್ಥಾನವನ್ನು ನೀಡಲಾಯಿತು. ಕ್ರೀಡಾ ಸಚಿವಾಲಯದ ಒತ್ತಾಯದ ಮೇರೆಗೆ ನಾನು ಹುದ್ದೆ ವಹಿಸಿಕೊಂಡೆ. ನಾನು ಕೇಳದಿರುವುದನ್ನು ಪಡೆದುಕೊಂಡು ಈಗ ಅನವಶ್ಯಕ ವಿವಾದ ಹುಟ್ಟುಹಾಕಿಕೊಳ್ಳುವ ಅವಶ್ಯಕತೆ ನನಗಿಲ್ಲ ಎಂದು ಮೇರಿ ಕೋಮ್ ಹೇಳಿದರು.
ಕಳೆದ ಮಾರ್ಚ್ ತಿಂಗಳಲ್ಲಿ ಅಂದಿನ ಕ್ರೀಡಾ ಸಚಿವ ವಿಜಯ್ ಗೊಯೆಲ್, 12 ಮಂದಿಯನ್ನು ಕ್ರೀಡಾ ಇಲಾಖೆಯಡಿ ವೀಕ್ಷಕರಾಗಿ ನೇಮಿಸಿದ್ದರು.
12 ಮಂದಿ ಪಟ್ಟಿಯಲ್ಲಿ ಅಭಿನವ್ ಬಿಂದ್ರಾ, ಸುಶಿಲ್ ಕುಮಾರ್ ಮತ್ತು ಮಾಜಿ ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತ ಅಖಿಲ್ ಕುಮಾರ್ ಇದ್ದಾರೆ. ಅವರಲ್ಲಿ ಸುಶಿಲ್ ಕುಮಾರ್ ಮತ್ತು ಮೇರಿ ಕೊಮ್ ಸಕ್ರಿಯರಾಗಿದ್ದಾರೆ. ಪಟ್ಟಿಯಲ್ಲಿರುವವರಲ್ಲಿ ಅಖಿಲ್ ಕುಮಾರ್ ರಾಷ್ಟ್ರೀಯ ತಂಡದಲ್ಲಿಲ್ಲ.
''ನನಗೆ ಸರ್ಕಾರ ನೀಡಿದ ಈ ಸ್ಥಾನದಲ್ಲಿ ಆಸಕ್ತಿಯಿಲ್ಲ. ಹೀಗಾಗಿ ರಾಜಿನಾಮೆ ನೀಡುತ್ತೇನೆ. ನನ್ನ ಬಳಿ ಮಾಡಲು ಬೇರೆ ತುಂಬಾ ಕೆಲಸಗಳಿವೆ ಎನ್ನುತ್ತಾರೆ ಮೇರಿ ಕೊಮ್. ಮುಂದಿನ ವರ್ಷ ಕಾಮನ್ ವೆಲ್ತ್ ಮತ್ತು ಏಷ್ಯನ್ ಗೇಮ್ ಗಳ ಮೇಲೆ ಚಿತ್ತ ಹರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com