ನವದೆಹಲಿ: ಫಿಫಾ ಅಂಡರ್-17 ವಿಶ್ವ ಕಪ್ ನ ಗ್ರೂಪ್ ಎ ಪಂದ್ಯದಲ್ಲಿ ಘಾನಾ ವಿರುದ್ಧ 4-0 ಅಂತರದಿಂದ ಸೋಲನ್ನು ಅನುಭವಿಸುವುದರೊದನೆ ಬಾರತ ಸರಣಿಯಿಂದ ಹೊರ ನಡೆದಿದೆ.ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಪರಾಭವಗೊಂಡಿದೆ.
ಹಿಂದಿನ ಎರಡು ಪಂದ್ಯಗಳಲ್ಲಿ ಸಹ ಸೋತಿದ್ದ ಅಮರ್‌ಜೀತ್ ಕಿಯಾಮ್ ಪಡೆ ಆರಂಭದಿಂದಲೇ ಉತ್ತಮ ಪೈಪೋಟಿ ನೀಡುವ ಪ್ರಯತ್ನ ನಡೆಸಿತು. ಇನ್ನೊಂದೆಡೆ ಘಾನಾ ಮಿಂಚಿನ ಆಟವಾಡಿ ಗೋಲುಗಳಿಸಿಕೊಳ್ಳುವತ್ತ ಎಲ್ಲಾ ರೀತಿಯ ಪ್ರಯತ್ನ ನಡೆಸಿತ್ತು.
ಪಂದ್ಯದ 43ನೇ ನಿಮಿಷದವರೆಗೂ ಎದುರಾಳಿಗಳು ಯಾವ ಗೋಲನ್ನು ದಾಖಲಿಸದಂತೆ ಭಾರತ ಪ್ರಬಲ ಪೈಪೋಟಿ ನೀಡಿತ್ತು. ಆದರೆ 43ನೇ ನಿಮಿಷದಲ್ಲಿ ಎರಿಕ್ ಅಯಿಹಾ ಘಾನಾ ಪರವಾಗಿ ಗೋಲು ದಾಖಲಿಸಿ ಎದುರಾಳಿಯ ಮುನ್ನಡೆಗೆ ಕಾರಣರಾದರು.
ದ್ವಿತೀಯಾರ್ಧದಲ್ಲಿ ಘಾನಾ ಆಟಗಾರರು ಗೋಲು ಗಳಿಸಲಿಕ್ಕಾಗಿ ಹೆಚ್ಚಿನ ಪ್ರಯತ್ನವನ್ನು ಹಾಕಿದ್ದರು. 52ನೇ ನಿಮಿಷದಲ್ಲಿ ಎರಿಕ್ ಅಯಿಹಾ ಮತ್ತೊಂದು ಗೋಲು ದಾಖಲಿಸಿದ್ದರು. ಮುಂದೆ ಅರ್ಧಗಂಟೆಯ ಬಳಿಕ ಗಾನಾ ತಂಡ ಆಟ್ದ ಮೇಲೆ ಹಿಡಿತ ಸಾಧಿಸಿತು.
86ನೇ ನಿಮಿಷದಲ್ಲಿ ರಿಚರ್ಡ್ ಡಾನ್ಸೊ ಚೆಂಡನ್ನು ಗುರಿ ಮುಟ್ಟಿಸಿದರೆ. 87ನೇ ನಿಮಿಷಕ್ಕೆ ಎಮಾನುಯೆಲ್ ಟೋಕು ಇನ್ನೊಂದು ಗೋಲು ದಾಖಲಿಸಿದರು. ಹೀಗೆ ಒಟ್ಟಾರೆ ಪ್ರವಾಸಿ ತಂಡ 4–0 ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿತು.