ಡೆನ್ಮಾರ್ಕ್ ಓಪನ್: ಕಿಡಂಬಿ ಶ್ರೀಕಾಂತ್ ಸೆಮೀಸ್ ಗೆ ಪ್ರವೇಶ, ಸೈನಾ, ಪ್ರನೋಯ್ ಸವಾಲು ಅಂತ್ಯ

ಭಾರತದ ಕಿಡಂಬಿ ಶ್ರೀಕಾಂತ್ ವಿಶ್ವ ಚಾಂಪಿಯನ್ ವಿಕ್ಟರ್ ಆಕ್ಸೆಲ್ಸನ್ ಅವರನ್ನು ಮಣಿಸಿ ಡೆನ್ಮಾರ್ಕ್ ಓಪನ್ ಸೆಮಿ ಫೈನಲ್ ತಲುಪಿದ್ದಾರೆ.
ಕಿಡಂಬಿ ಶ್ರೀಕಾಂತ್,
ಕಿಡಂಬಿ ಶ್ರೀಕಾಂತ್,
Updated on
ಒಡೆನ್ಸ್:  ಭಾರತದ ಕಿಡಂಬಿ ಶ್ರೀಕಾಂತ್ ವಿಶ್ವ ಚಾಂಪಿಯನ್ ವಿಕ್ಟರ್ ಆಕ್ಸೆಲ್ಸನ್ ಅವರನ್ನು ಮಣಿಸಿ ಡೆನ್ಮಾರ್ಕ್ ಓಪನ್ ಸೆಮಿ ಫೈನಲ್ ತಲುಪಿದ್ದಾರೆ. ಇದೇ ವೇಳೆ ಸೈನಾ ನೆಹ್ವಾಲ್ ಮತ್ತು ಎಚ್.ಎಸ್. ಪ್ರನೋಯ್  ಡೆನ್ಮಾರ್ಕ್ ಓಪನ್ ವರ್ಲ್ಡ್ ಸೂರಪ್ ಸೀರೀಸ್ ಪ್ರೀಮಿಯರ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಸೋತು ಹಿಮ್ಮೆಟ್ಟಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ 8ನೇ ಶ್ರೇಯಾಂಕಿತ ಶ್ರೀಕಾಂತ್ ರಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತ ಮತ್ತು 2ನೇ ಶ್ರೇಯಾಂಕದ ಆಕ್ಸೆಲ್ಸೆನ್ ಅವರನ್ನು 56 ನಿಮಿಷಗಳಲ್ಲಿ 14-21, 22-20, 21-7 ಸೆಟ್ ಗಳಿಂದ ಮಣಿಸಿದರು. 
ಜಪಾನಿನ ನಾಲ್ಕನೇ ಶ್ರೇಯಾಂಕಿತ ಅಕೆನೆ ಯಮಾಗುಚಿ ಅವರು ಸೈನಾವನ್ನು 10-21, 13-21 ಸೆಟ್ ಅಂತರದಿಂದ ಸೋಲಿಸಿ ತಾವು ಸೆಮೀಸ್ ಪ್ರವೇಶಿಸಿದರು.
ದಕ್ಷಿಣ ಕೊರಿಯಾದ ಅಗ್ರ ಶ್ರೇಯಾಂಕಿತ ಸನ್ ವಾನ್ ಹೊ ವಿರುದ್ದ ಪ್ರನೋಯ್ 44 ನಿಮಿಷದ ಅವಧಿಯಲ್ಲಿ  13-21, 18-21 ಸೆಟ್ ಗಳಿಂದ ಪರಾಜಿತರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com