ವಿಶ್ವನಾಥನ್ ಆನಂದ್
ಕ್ರೀಡೆ
15 ವರ್ಷಗಳ ನಂತರ ವಿಶ್ವಕಪ್ ಗೆ ಮರಳಿದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್
ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ 15 ವರ್ಷಗಳ ನಂತರ ಎಫ್ ಐಡಿಇ ವಿಶ್ವ ಕಪ್ ಗೆ ಮರಳಿದ್ದಾರೆ.
ಜಾರ್ಜಿಯಾ: ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ 15 ವರ್ಷಗಳ ನಂತರ ಎಫ್ ಫಿಡೆ ವಿಶ್ವ ಕಪ್ ಗೆ ಮರಳಿದ್ದಾರೆ. 2018ರ ಕ್ಯಾಂಡಿಡೇಟ್ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ನಿರ್ಧಾರದೊಡನೆ ಅವರು ಈ ಟೂರ್ನಮೆಂಟ್ ಗೆ ವಾಪಾಸಾಗಿದ್ದಾರೆ.
ಆನಂದ್ ಅವರು ಏಳು ಜನರ ಭಾರತೀಯ ತಂಡವನ್ನು 128 ಕ್ರೀಡಾಳುಗಳ ನಾಕ್ ಔಟ್ ಪಂದ್ಯಾವಳಿಯಲ್ಲಿ ಮುನ್ನಡೆಸಲಿದ್ದಾರೆ. ಅಲ್ಲಿ ಫೈನಲ್ಸ್ ನಲ್ಲಿ ಉಳಿದುಕೊಂಡವರು ಕ್ಯಾಂಡಿಡೇಟ್ ಟೂರ್ನಿಯಲ್ಲಿ ಆಡಲಿದ್ದಾರೆ.
ಕ್ಯಾಂಡಿಡೇಟ್ ಟೂರ್ನಿಯು ವಿಶ್ವ ಚೆಸ್ ಚಾಂಪಿಯನ್ ಶಿಪ್ ನ ಸ್ಪರ್ಧಿಯನ್ನು ನಿರ್ಧರಿಸುವ ಕ್ರೀಡಾ ಸರಣಿಯಾಗಿದೆ.
47 ರ ಹರೆಯದ ಆನಂದ್ ಚೀನಾ (2000) ಮತ್ತು ಹೈದರಾಬಾದ್ (2002) ನಲ್ಲಿ ನಡೆದ ಚೆಸ್ ವಿಶ್ವಕಪ್ ಗಳನ್ನು ಗೆದ್ದಿದ್ದಾರೆ. 2007 ರಲ್ಲಿ ವಿಶ್ವ ಚಾಂಪಿಯನ್ ಶಿಪ್ ಗೆದ್ದ ನಂತರ ಆನಂದ್ ಯಾವುದೇ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಆಡಿರಲಿಲ್ಲ.
ಆನಂದ್ ಅವರು ಮೊದಲ ಸುತ್ತಿನಲ್ಲಿ 2480 ನೇ ಶ್ರೇಯಾಂಕದ ಯೇವ್ ಲಿ ಟಿಯಾನ್ ರ ವಿರುದ್ದ ಸೆಣೆಸಲಿದ್ದು ಈ ಸುತ್ತಿನಲ್ಲಿ ವಿಜೇತರಾದಲ್ಲಿ, ಎರಡನೇ ಸುತ್ತಿನಲ್ಲಿ ಜಿಎಂ ವರುಜನ್ ಅಕೋಬಿಯಾನ್ ಅವರನ್ನು ಎದುರಿಸಬೇಕಾಗುತ್ತದೆ.
ಆನಂದ್ ಉತ್ತಮ ಪ್ರದರ್ಶನ ನೀಡಿ ಮುಂದುವರ್ತಿದರೆ, ಇಂಗ್ಲೆಂಡ್ ನ ನಂ .1 ಆಟಗಾರ ಮೈಕೆಲ್ ಆಡಮ್ಸ್, ರನ್ನು ಮುಂದಿನ ಸುತ್ತಿನಲ್ಲಿ ಹಿಕಾರ ನಕುಮುರ ರವರನ್ನೂ ಎದುರಿಸುತ್ತಾರೆ..
ವಿಶ್ವನಾಥನ್ ಆನಂದ್ ಭಾರತದ ಪ್ರಸಿದ್ಧ ಚೆಸ್ ಆಟಗಾರರಾಗಿದ್ದಾರೆ. ಫಿಡೆ ಕ್ರಮಾಂಕಗಳ ಪ್ರಕಾರ, 2004ರಲ್ಲಿ ವಿಶ್ವದಲ್ಲಿ ಎರಡನೆ ಸ್ಥಾನ ಪಡೆದಿದಿದ್ದರು. ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿರುವ ಆನಂದ್ 2007ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ