ಮಹಿಳಾ ಟೆನಿಸ್: ವಿಶ್ವ ನಂ..1 ಸ್ಥಾನ ಅಲಂಕರಿಸಿದ ಗಾರ್ಬಿನ್ ಮುಗುರುಜಾ

ಮಹಿಳಾ ಟೆನಿಸ್ ಅಸೋಸಿಯೇಷನ್ (ಡಬ್ಲ್ಯೂ ಟಿಎ) ಸೋಮವಾರ ಪ್ರಕಟಿಸಿದ ನೂತನ ಶ್ರೇಯಾಂಕ ಪಟ್ಟೀಯಲ್ಲಿ ವಿಂಬಲ್ಡನ್ ಚಾಂಪಿಯನ್ ಗಾರ್ಬಿನ್ ಮುಗುರುಜಾ ವಿಶ್ವದ ಪ್ರಥಮ ಸ್ಥಾನಿಯಾಗಿ ಗುರುತಿಸಿಕೊಂಡರು.
ವಿಶ್ವ No.1 ಗಾರ್ಬಿನ್ ಮುಗುರುಜಾ
ವಿಶ್ವ No.1 ಗಾರ್ಬಿನ್ ಮುಗುರುಜಾ
ಪ್ಯಾರೀಸ್: ಮಹಿಳಾ ಟೆನಿಸ್ ಅಸೋಸಿಯೇಷನ್ (ಡಬ್ಲ್ಯೂ ಟಿಎ) ಸೋಮವಾರ ಪ್ರಕಟಿಸಿದ ನೂತನ ಶ್ರೇಯಾಂಕ ಪಟ್ಟಿಯಲ್ಲಿ  ವಿಂಬಲ್ಡನ್ ಚಾಂಪಿಯನ್ ಗಾರ್ಬಿನ್ ಮುಗುರುಜಾ ವಿಶ್ವದ ಪ್ರಥಮ ಸ್ಥಾನಿಯಾಗಿ ಗುರುತಿಸಿಕೊಂಡರು.
ಮುಗುರುಜಾ,  1975 ರಲ್ಲಿ ಕಂಪ್ಯೂಟರೀಕೃತ ಶ್ರೇಯಾಂಕಗಳನ್ನು ಪರಿಚಯಿಸಿದ ನಂತರ ಈ ಐತಿಹಾಸಿಕ ಸಾಧನೆ ಮಾಡಿದ ಸ್ಪೇನ್ ನ ಎರಡನೇ ಆಟಗಾರ್ತಿ ಎನಿಸಿದ್ದಾರೆ. ಇವರು ಒಟ್ಟಾರೆ ಮಹಿಳೆಯರಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ 24 ನೇ ಮಹಿಳೆ ಆಗಿದ್ದಾರೆ..
23 ರ ಹರೆಯದ ಮುಗುರುಜಾ, ಕರೊಲಿನಾ ಪ್ಲಿಸ್ಕೊವಾದಿಂದ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ. ಯು.ಎಸ್ ಓಪನ್ ಪಂದ್ಯಾವಳಿಯಲ್ಲಿ ಕೊಕೊ ವಂದ್ವೀಘೆ ಅವರು ಪ್ಲಿಸ್ಕೊವಾರನ್ನು  ಕ್ವಾರ್ಟರ್ ಫೈನಲ್ ಸೋಲಿಸಿದ ನಂತರ ಅವರು ನಂಬರ್ ಒನ್ ಪಟ್ಟ ದಿಂದ ಕೆಳಗಿಳಿಯ ಬೇಕಾಯಿತು..
"ಡಬ್ಲ್ಯೂ ಟಿಎ ಶ್ರೇಯಾಂಕದಲ್ಲಿ ನಂಬರ್ ಒನ್ ಆದದ್ದು ಅತ್ಯಂತ ಸಂತಸ ತಂದಿದೆ. ರಾಫೆಲ್ ನಡಾಲ್ ಅವರೊಂದಿಗೆ ಅಂತಹ ವಿಶೇಷ ಕ್ಷಣವನ್ನು ಹಂಚಿಕೊಳ್ಳಲು ನಾನು ಬಹಳ ಹೆಮ್ಮೆಪಡುತ್ತೇನೆ, ನಾನು ಈ ಉನ್ನತ ಸ್ಥಾನವನ್ನು ದೀಘ್ಕಾಲ ಉಳಿಸಿಕೊಳ್ಳಲು ಬಯಸುತ್ತೇನೆ" ಎಂದು ನಂಬರ್ ಒನ್ ಶ್ರೇಯಾಂಕಿತೆ ಗಾರ್ಬಿನ್ ಮುಗುರುಜಾ ತಮ್ಮ ಸಂತಸವನ್ನು ಹಂಚಿಕೊಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com