ಕೊರಿಯಾ ಸೂಪರ್ ಸಿರೀಸ್: ಪ್ರಿ ಕ್ವಾರ್ಟರ್ ಹಂತ ತಲುಪಿದ ಸಿಂಧು, ಕಷ್ಯಪ್

ಬುಧವಾರ ನಡೆದ ಕೊರಿಯಾ ಸೂಪರ್ ಸೀರೀಸ್ ನ ಪಂದ್ಯಗಳಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮತ್ತು ಪರುಪಳ್ಳಿ ಕಶ್ಯಪ್ ಅವರು ತಮ್ಮ ಕ್ರೀದಾ ಪ್ರಯಾಣ ಮುಂದುವರಿಸಿದ್ದು ಪ್ರಿ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆದಿದ್ದಾರೆ.
ಭಾರತೀಯ ಶಟ್ಲರ್ ಪರುಪಳ್ಳಿ ಕಶ್ಯಪ್ ಮತ್ತು ಪಿ.ವಿ ಸಿಂಧು
ಭಾರತೀಯ ಶಟ್ಲರ್ ಪರುಪಳ್ಳಿ ಕಶ್ಯಪ್ ಮತ್ತು ಪಿ.ವಿ ಸಿಂಧು
ಸಿಯೋಲ್: ಬುಧವಾರ ನಡೆದ ಕೊರಿಯಾ ಸೂಪರ್ ಸೀರೀಸ್ ನ ಪಂದ್ಯಗಳಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮತ್ತು ಪರುಪಳ್ಳಿ ಕಶ್ಯಪ್ ಅವರು ತಮ್ಮ ಕ್ರೀದಾ ಪ್ರಯಾಣ ಮುಂದುವರಿಸಿದ್ದು ಪ್ರಿ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆದಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಿಂಧು ಹಾಂಗ್ ಕಾಂಗ್ ನ ನಿಗಾನ್ ಯಿ ಚೆಯುಂಗ್ ಅವರನ್ನು 21-13, 21-8 ಸೆಟ್ ಗಳಿಂದ ಸೋಲಿಸಿದರು.
ಮತ್ತೊಂದೆಡೆ, ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪರುಪಳ್ಳಿ ಕಶ್ಯಪ್ ಚೀನಾದ ತೈಪೈನ ಜ್ಸು ಜೆನ್ ಹಾವೊ ಅವರನ್ನು 21-13, 21-16 ಸೆಟ್ ಗಳಿಂದ ಸೋಲಿಸಿದರು.
ಸಮೀರ್ ವರ್ಮಾ ಸಹ ಥೈಲ್ಯಾಂಡಿನ ತನ್ಸಾಂಗ್ ಸಾನ್ಸ್ಂಬೊನ್ಸುಕ್ ಅವರನ್ನು 21-13, 21-23, 21-9 ಅಂತರದಿಂದ ಸೋಲಿಸಿದ್ದಾರೆ.
ಆದರೆ, ಸೌರಭ್ ವರ್ಮಾ ತಮ್ಮ ಇನ್ನೊಂದು ಪಂದ್ಯದಲ್ಲಿ ಜಪಾನ್ ನ ಕೆಂಟಾ ನಿಶಿಮೊಟೊ ಅವರ ವಿರುದ್ಧ  21-18, 13-21, 19-21 ಸೆಟ್ ಗಳಿಂದ ಸೋಲುಂಡಿದ್ದಾರೆ. 
ಅಲ್ಲದೆ, ಎಚ್ ಎಸ್ ಪ್ರಣಯ್ ಕೂಡಾ ಪಂದ್ಯಾವಳಿಯಿಂದ ಹೊರ ಬಿದ್ದಿದ್ದಾರೆ. ವಿಶ್ವದ ನಂಬರ್ 9 ಎನ್ಜಿ ಕಾಂಗ್ ಲಾಂಗ್ ಆಂಗಸ್ ವಿರುದ್ಧ 17-21, 23-21, 14-21 ಸೆಟ್ ಗಳಿಂದ ಇವರು ಸೋಲನುಭವಿಸಿದರು.
ಪುರುಷರ ಡಬಲ್ಸ್ ಪಂದ್ಯಾವಳಿಯಲ್ಲಿ, ಸಾತ್ವಿಕ್ಸಾಯರಾಜ್ ರಾಂಕಿರೆಡ್ಡಿ  ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷಿಯಾದ ಜೋಡಿ ಖಿಮ್ ವಾ ಲಿಮ್ ಮತ್ತು ಲಿನ್ ಚಿಯಾ ಯು ಯನ್ನು 50 ನಿಮಿಷಗಳಲ್ಲಿ   21-9, 22-24, 21-12 ಸೆಟ್ ಗಳಿಂದ ಸೋಲಿಸಿದರು.
ಮಿಶ್ರ ಡಬಲ್ಸ್ ಪಂದ್ಯದಲ್ಲಿ, ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ಸಾಯರಾಜ್ ರಾಂಕಿರೆಡ್ಡಿ  ಅವರು 18-21, 19-21 ಅಂತರದಲ್ಲಿ ಟ್ಯಾಂಗ್ ಚುನ್ ಮ್ಯಾನ್ ಮತ್ತು ಟ್ಸೆ ಯಿಂಗ್ ಸ್ಯೂ ವಿರುದ್ಧ ಸೋಲುಂಡು  ಪಂದ್ಯಾವಳಿಯಿಂದ ಹೊರಗುಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com