ಫಿಫಾ ರ್ಯಾಂಕಿಂಗ್: ಮತ್ತೆ ಅಗ್ರ ಸ್ಥಾನಕ್ಕೆ ಏರಿದ ಜರ್ಮನಿ

ಜರ್ಮನಿ ಫಿಫಾ ರ್ಯಾಂಕಿಂಗ್ ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ.ಫಿಪಾ ವಿಶ್ವ ಕಪ್ ಅರ್ಹತಾ ಪಂದ್ಯದ ನಂತರ ಜರ್ಮನಿ ತಾನು ಬ್ರಿಝಿಲ್ ನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದೆ.
ಜರ್ಮನಿ ಫುಟ್ಬಾಲ್ ತಂಡ
ಜರ್ಮನಿ ಫುಟ್ಬಾಲ್ ತಂಡ
ಜ್ಯೂರಿಚ್: ಜರ್ಮನಿ ಫಿಫಾ ರ್ಯಾಂಕಿಂಗ್ ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ.ಫಿಪಾ ವಿಶ್ವ ಕಪ್ ಅರ್ಹತಾ ಪಂದ್ಯದ ನಂತರ ಜರ್ಮನಿ ತಾನು ಬ್ರಿಝಿಲ್ ನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದೆ.
ಯುರೋಪಿಯನ್ ಚಾಂಪಿಯನ್ ಪೋರ್ಚುಗಲ್ ಮೂರನೇ ಸ್ಥಾನದಲ್ಲಿದೆ. ಅರ್ಜೆಂಟೀನಾ 4ನೇ ಸ್ಥಾನ ಮತ್ತು ಬೆಲ್ಜಿಯಂ 5ನೇ ಸ್ಥಾನದಲ್ಲಿದೆ. 
ಯುರೋಪಿಯನ್ ತಂಡಗಳು, ಪ್ರತಿಯೊಬ್ಬರೂ ಎರಡು ಅರ್ಹತಾ ಪಂದ್ಯಗಳನ್ನು ಆಡಿದ್ದರು. ಅದರಲ್ಲಿ ತಮ್ಮ ಎದುರಾಳಿ ದಕ್ಷಿಣ ಅಮೆರಿಕಾ ದೇಶಗಳ ವಿರುದ್ಧ ಗೆಲುವು ಸಾಧಿಸಿ ಮುಂಬರುವ ವಿಶ್ವ ಕಪ್ ಗೆ ಅರ್ಹತೆ ಗಳಿಸಿದರು.
ಫಿಪಾ  ವಿಶ್ವ ಕಪ್ ನಡೆಸಿಕೊಡಲಿರುವ ರಷ್ಯಾ 64ನೇ ಸ್ಥಾನದಲ್ಲಿದೆ.
ಇನ್ನು ಪೋಲೆಂಡ್ 6ನೇ ಸ್ಥಾನದಲ್ಲಿದ್ದರೆ ನಂತರದಲ್ಲಿ ಸ್ವಿಜರ್ಲ್ಯಾಂಡ್, ಫ್ರಾನ್ಸ್, ಚಿಲಿ ಮತ್ತು ಕೊಲಂಬಿಯಾಗಳಿವೆ.
ಯುರೋಪ್ ಹೊರತಾಗಿ ಇತರೆ ಖಂದಗಳ ತಂಡಗಳಲ್ಲಿ ಮೆಕ್ಸಿಕೋ 14ನೇ ಇರಾನ್ 25ನೇ ಮತ್ತು ಈಜಿಪ್ಟ್ 30ನೇ ಸ್ಥಾನದಲ್ಲಿದೆ. 
ನೂತನ ಪಟ್ಟಿಯಲ್ಲಿ ಭಾರತ 107ನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com