ಈಕೆ ಮಾರ್ಷಲ್ ಆರ್ಟ್ಸ್‌ನಲ್ಲಿ ಪುರುಷ ಸ್ಪರ್ಧಿಯನ್ನು ಮಣ್ಣು ಮುಕ್ಕಿಸಿದ್ದ ಕೋಮಲ್ ರಾವ್

ಮಾರ್ಷಲ್ ಆರ್ಟ್ಸ್ ನಲ್ಲಿ ಪುರುಷ ಸ್ಪರ್ಧಿಯನ್ನು ಸೋಲಿಸಿದ ಜಗತ್ತಿನ ಮೊದಲ ಮಹಿಳೆ ಎಂಬ ಖ್ಯಾತಿಗೂ 35 ವರ್ಷದ ಕೋಮಲ್ ರಾವ್ ಭಾಜನರಾಗಿದ್ದಾರೆ...
ಕೋಮಲ್ ರಾವ್
ಕೋಮಲ್ ರಾವ್
ಮೈಸೂರು: ಈಕೆ ಕೋಮಲ್ ರಾವ್ ಅಂತ. ಮಾರ್ಷಲ್ ಆರ್ಟ್ಸ್ ನಲ್ಲಿ ಖ್ಯಾತರಾಗಿರುವ ಅವರು ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ನಲ್ಲಿ ಪುರುಷ ಸ್ಪರ್ಧಿಯನ್ನು ಮಣ್ಣು ಮುಕ್ಕಿಸಿದ್ದರು. ಅಲ್ಲದೆ 2017ರ ಜುಲೈ ನಲ್ಲಿ ಜರ್ಮನಿಯಲ್ಲಿ ನಡೆದಿದ್ದ ವೈಬಿಎನ್ ನಲ್ಲೂ ಭಾಗವಹಿಸಿದ್ದರು. 
ಮಾರ್ಷಲ್ ಆರ್ಟ್ಸ್ ನಲ್ಲಿ ಪುರುಷ ಸ್ಪರ್ಧಿಯನ್ನು ಸೋಲಿಸಿದ ಜಗತ್ತಿನ ಮೊದಲ ಮಹಿಳೆ ಎಂಬ ಖ್ಯಾತಿಗೂ 35 ವರ್ಷದ ಕೋಮಲ್ ರಾವ್ ಭಾಜನರಾಗಿದ್ದಾರೆ. ಭಾರತದ ಮೊದಲ ಮಹಿಳಾ ಕಮಾಂಡೋ ಟ್ರೈನರ್ ಆಗಿರುವ ಡಾ ಸೀಮಾ ರಾವ್ ಅವರು ದತ್ತು ಪುತ್ರಿಯಾಗಿರುವ ಕೋಮಲ್ ರಾವ್ ಅವರು ಮುಂಬೈನಲ್ಲಿ ವಾಸವಾಗಿದ್ದು ಇತ್ತೀಚೆಗಷ್ಟೇ ಕುಟುಂಬ ಸಮೇತರಾಗಿ ಮೈಸೂರಿಗೆ ಭೇಟಿ ನೀಡಿದ್ದಾರೆ. 
ಕೋಮಲ್ ರಾವ್ ಅವರು ತಮ್ಮ 15ನೇ ವಯಸ್ಸಿನಲ್ಲೇ ಮಾರ್ಷಲ್ ಆರ್ಟ್ಸ್ ಕಲಿಯಲು ಪ್ರಾರಂಭಿಸಿದ್ದರು. ಮಾರ್ಷಲ್ ಆರ್ಟ್ಸ್ ದಂತಕತೆ ಬ್ರೂಸ್ ಲೀ ಅವರ ಶಿಷ್ಯನಾಗಿರುವ ರಿಚರ್ಡ್ ಬಸ್ಟಿಲೋ ಅವರು ಪ್ರಮಾಣಿಕರಿಸಿರುವ ಜಗತ್ತಿನ ಐದು ಮಹಿಳಾ ಟ್ರೈನರ್ ನಲ್ಲಿ ಇವರು ಒಬ್ಬರಾಗಿದ್ದಾರೆ. 
ಗ್ರ್ಯಾಂಡ್ ಮಾಸ್ಟರ್ ರಿಚರ್ಡ್ ಬಸ್ಟಿಲೋ ಅವರ ನೇತೃತ್ವದಲ್ಲಿ ಜೀತ್ ಕುನೆ ಡೊ(ಜೆಕೆಡಿ)ಯಲ್ಲಿ ಅಡ್ವಾನ್ಸ್ಡ್ ಟ್ರೈನಿಂಗ್ ಮುಗಿಸಿದ್ದಾರೆ. ಇನ್ನು ಕೋಮಲ್ ರಾವ್ ಅವರು ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಫೈಟ್ ಕ್ಲಬ್ ಸಹ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com