ಜಪಾನ್ ಓಪನ್ ಬ್ಯಾಡ್ಮಿಂಟನ್: ಕಿದಂಬಿ ಶ್ರೀಕಾಂತ್, ಹೆಚ್ ಎಸ್ ಪ್ರಣಯ್ ಗೆ ಸೋಲು, ಸೆಮೀಸ್ ಗೆ ಪ್ರಣವ್-ಸಿಕ್ಕಿ

ಜಪಾನ್ ಓಪನ್ ಸೂಪರ್ ಸೀರಿಸ್ ನ ಬ್ಯಾಡ್ಮಿಂಟನ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಡೆನ್ಮಾರ್ಕ್ ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಸೋತಿದ್ದಾರೆ.
ಕಿದಂಬಿ ಶ್ರೀಕಾಂತ್
ಕಿದಂಬಿ ಶ್ರೀಕಾಂತ್
Updated on
ಟೋಕಿಯೋ: ಜಪಾನ್ ಓಪನ್ ಸೂಪರ್ ಸೀರಿಸ್ ನ ಬ್ಯಾಡ್ಮಿಂಟನ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಡೆನ್ಮಾರ್ಕ್ ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಸೋತಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ಕೆ.ಶ್ರೀಕಾಂತ್ ಸೋತಿದ್ದರೆ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಣವ್ ಜೆರ್ರಿ ಚೋಪ್ರಾ-ಎನ್ ಸಿಕ್ಕಿ ರೆಡ್ಡಿ ಸೆಮಿಫೈನಲ್ಸ್ ಗೆ ತಲುಪಿದ್ದಾರೆ. 
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡೆದ 40 ನಿಮಿಷಗಳ ಪಂದ್ಯದಲ್ಲಿ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಕೆ.ಶ್ರೀಕಾಂತ್ 17-21-17-21 ಸೆಟ್ ಗಳ ಅಂತರದಿಂದ ಪರಾಭವಗೊಂಡಿದ್ದು, ಅಕ್ಸೆಲ್ಸನ್ 3-2 ಅಂತರದಿಂದ ಗೆದ್ದಿದ್ದಾರೆ. ಇನ್ನು ಯುಎಸ್ ಓಪನ್ ಚಾಂಪಿಯನ್ ಹೆಚ್ಎಸ್ ಪ್ರಣಯ್ ಸಹ ಚೀನಾದ ಎದುರಾಳಿ ಎದುರು  15-21 14-21 ಸೆಟ್ ಗಳಿಂದ ಸೋತಿದ್ದಾರೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಕೋರಿಯಾ ಎದುರಾಳಿಯನ್ನು 21-18 9-21 21-19 ಸೆಟ್ ಗಳಿಂದ ಮಣಿಸಿರುವ ಪ್ರಣವ್-ಸಿಕ್ಕಿ ಜೋಡಿ ಸೆಮಿಫೈನಲ್ಸ್ ಗೆ ಪ್ರವೇಶಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com