101 ವರ್ಷದ ಭಾರತೀಯ ಅಥ್ಲೀಟ್‌ಗೆ ವೀಸಾ ನಿರಾಕರಿಸಿದ ಚೀನಾ

ಶತಾಯುಷಿ ಭಾರತೀಯ ಅಥ್ಲೀಟ್‌ಗೆ ಏಷ್ಯಾನ್ ಮಾಸ್ಟರ್ಸ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ವೀಸಾವನ್ನು ನೀಡಲು ಚೀನಾ ನಿರಾಕರಿಸಿದೆ...
ಮಾನ್ ಕೌರ್
ಮಾನ್ ಕೌರ್
ನವದೆಹಲಿ: ಶತಾಯುಷಿ ಭಾರತೀಯ ಅಥ್ಲೀಟ್‌ಗೆ ಏಷ್ಯಾನ್ ಮಾಸ್ಟರ್ಸ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ವೀಸಾವನ್ನು ನೀಡಲು ಚೀನಾ ನಿರಾಕರಿಸಿದೆ.
ಚಂಡೀಘಡದ ಮಿರಾಕಲ್ ಮಾನ್ ಕೌರ್ ಅವರಿಗೆ ವೀಸಾ ನೀಡಲು ಚೀನಾ ನಿರಾಕರಿಸಿದೆ. ಮಾನ್ ಕೌರ್ ಅವರು ಕಳೆದ ಏಪ್ರಿಲ್ ನಲ್ಲಿ ಆಕ್ಲೆಂಡ್ ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಗೇಮ್ಸ್ ನ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. 
ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ವೀಸಾಗಾಗಿ ಅರ್ಜಿ ಸಲ್ಲಿಸಿದ್ದು ಅರ್ಜಿ ತಿರಸ್ಕೃತಗೊಂಡಿರುವುದಕ್ಕೆ ಮಾನ್ ಕೌರ್ ತುಂಬಾ ಬೇಸರಗೊಂಡಿದ್ದಾರೆ. ಈ ಬಾರಿ ಚಾಂಪಿಯನ್ ಶಿಪ್ ನಲ್ಲಿ ನಾನು ಜಯ ಗಳಿಸುವ ನಂಬಿಕೆ ಇತ್ತು. ಆದರೂ ಪರವಾಗಿಲ್ಲ ನಾನು ಓಟವನ್ನು ಬಿಡುವುದಿಲ್ಲ. ಮುಂಬರುವ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗುತ್ತೇನೆ ಎಂದು ಹೇಳಿದರು. 
ಮಾನ್ ಕೌರ್ ಅವರು 93 ವರ್ಷವಿದ್ದಾಗಿನಿಂದ ಓಟದ ಸ್ಪರ್ಧೆಯಲ್ಲಿ ಓಡಲು ಶುರು ಮಾಡಿದರು. ಅವರು 100 ಹಾಗೂ 200 ಮೀಟರ್ ಓಟ, ಶಾಟ್ ಪೂಟ್ ಮತ್ತು ಜಾವಲೀನ್ ಥ್ರೋ ವಿಭಾಗಗಳಲ್ಲಿ ಸ್ಪರ್ಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com