ಕಾಮನ್ ವೆಲ್ತ್‌ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ; ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದ ಸಿಂಧು

2018ರ ಕಾಮನ್ ವೆಲ್ತ್‌ ಕ್ರೀಡಾಕೂಟಕ್ಕೆ ಬುಧವಾರ ವರ್ಣರಂಜಿತ ಚಾಲನೆ ನೀಡಲಾಗಿದ್ದು, ರಿಯೊ ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ....
ಪಿವಿ ಸಿಂಧು
ಪಿವಿ ಸಿಂಧು
ಗೋಲ್ಡ್‌ ಕೋಸ್ಟ್: 2018ರ ಕಾಮನ್ ವೆಲ್ತ್‌ ಕ್ರೀಡಾಕೂಟಕ್ಕೆ ಬುಧವಾರ ವರ್ಣರಂಜಿತ ಚಾಲನೆ ನೀಡಲಾಗಿದ್ದು, ರಿಯೊ ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ತ್ರಿವರ್ಣ ದ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದರು.
ಕಾಮನ್ ವೆಲ್ತ್‌ ಗೇಮ್ಸ್ ನ 21ನೇ ಆವೃತ್ತಿಗೆ ಇಂದು ಆಸ್ಪ್ರೇಲಿಯಾದ ಗೋಲ್ಡ್‌ ಕೋಸ್ಟ್ ನ ಕರಾರ ಕ್ರೀಡಾಂಗಣದಲ್ಲಿ ಸ್ಥಳೀಯ ಸಂಪ್ರದಾಯಗಳ ಪ್ರಕಾರ ಚಾಲನೆ ನೀಡಲಾಯಿತು.
ಇದೇ ಮೊದಲ ಬಾರಿ ಭಾರತದ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಸೀರೆಗೆ ಕೊಕ್‌ ನೀಡಲಾಗಿದ್ದು, ಮಹಿಳಾ ಕ್ರೀಡಾಪಟುಗಳೂ ಕೂಡ ಸೂಟ್‌ ಧರಿಸಿ ಹೆಜ್ಜೆ ಹಾಕಿದರು. 
ಒಟ್ಟು 11 ದಿನಗಳ ಕಾಲ ನಡೆಯಲಿರುವ ಈ ಕ್ರೀಡಾ ಹಬ್ಬದಲ್ಲಿ 71 ರಾಷ್ಟ್ರಗಳ 6,600 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಭಾರತದಿಂದ 221 ಕ್ರೀಡಾಪಟುಗಳು ಕಾಮನ್‌ ವೆಲ್ತ್‌ ಅಖಾಡದಲ್ಲಿದ್ದಾರೆ.
ಕಳೆದ ಬಾರಿ ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 15 ಚಿನ್ನ, 30 ಬೆಳ್ಳಿ ಹಾಗೂ 19 ಕಂಚಿನ ಪದಕದೊಂದಿಗೆ ಒಟ್ಟು 64 ಪದಕಗಳನ್ನು ಭಾರತ ತಂಡ ಗೆದ್ದುಕೊಂಡಿತ್ತು. ಈ ಬಾರಿ ಪದಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಭರವಸೆಯಲ್ಲಿದೆ ಭಾರತ ತಂಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com