ವೈಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕದಿಂದ ಉತ್ತಮ ಜೀವನದ ಆಶಾವಾದದಲ್ಲಿ ಗುರುರಾಜ್ ಪೂಜಾರಿ

ಇಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ ನಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿಪದಕ ಗಳಿಸಿದ ...
ಗುರುರಾಜ್ ಪೂಜಾರಿ
ಗುರುರಾಜ್ ಪೂಜಾರಿ
Updated on

ಗೋಲ್ಡ್ ಕೋಸ್ಟ್/ಉಡುಪಿ: ಇಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ ನಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿಪದಕ ಗಳಿಸಿದ ಗುರುರಾಜ ಪೂಜಾರಿಯವರದ್ದು ಕೂಡ ಬೇರೆ ಒಲಿಂಪಿಕ್ ಕ್ರೀಡೆಗಳಲ್ಲಿ ಪ್ರಶಸ್ತಿ ಗಳಿಸಿದ ಕ್ರೀಡಾಪಟುಗಳಂತೆಯೇ.

ಉಡುಪಿ ಜಿಲ್ಲೆಯ ವಂಡ್ಸೆ ಗ್ರಾಮದಿಂದ ಬಂದ ಗುರುರಾಜ ಪೂಜಾರಿಯ ತಂದೆ ಟ್ರಕ್ ಡ್ರೈವರ್. ಗುರುರಾಜ್ ಅವರುಗೆ ಐದು ಮಂದಿ ಸೋದರರಿದ್ದಾರೆ. ಬಡತನದಲ್ಲಿ ಜೀವನ ಸಾಗಿಸಿದ ಗುರುರಾಜ್ ಗೆ ಇನ್ನು ಮುಂದೆ ಉತ್ತಮ ಜೀವನ ಸಾಗಿಸುವ ಆಶಾವಾದವಿದೆ.

ರೆಸ್ಲಿಂಗ್ ನಲ್ಲಿ ಮೊದಲು ತಮ್ಮ ಪ್ರಯತ್ನ ಆರಂಭಿಸಿದ ಗುರುರಾಜ್ ಧರ್ಮಸ್ಥಳದ ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ರಾಜೇಂದ್ರ ಪ್ರಸಾದ್ ಅವರ ಬಳಿ ತರಬೇತಿ ಆರಂಭಿಸಿದರು.
ನಿನ್ನೆ ಗುರುರಾಜ್ ಪೂಜಾರಿ 56 ಕೆಜಿ ವಿಭಾಗದ ವೈಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಾಗ ಎಲ್ಲೆಡೆಯಿಂದ ಕರತಾಡನ ಮುಗಿಲುಮುಟ್ಟಿತ್ತು. 25 ವರ್ಷ ವಯಸ್ಸಿನ ಗುರುರಾಜ್ ಎಸ್ ಡಿಎಂ ಕಾಲೇಜಿಗೆ ಸೇರಿದಾಗಲೇ ಯಾರೋ ಹೇಳಿದ್ದರಂತೆ, ಈತ ಕಾಮನ್ ವೆಲ್ತ್ ಗೇಮ್ ನಲ್ಲಿ ಪದಕ ಗೆಲ್ಲುತ್ತಾನೆ ಎಂದು.

2008ರಲ್ಲಿ ಒಲಿಂಪಿಕ್ ನಲ್ಲಿ ಸುಶಿಲ್ ಕುಮಾರ್ ಕಂಚಿನ ಪದಕ ಗೆದ್ದಾಗಲೇ ನಾನು ಕುಸ್ತಿಪಟು ಆಗಬೇಕೆಂದು ಬಯಸಿದೆ. ನನಗೆ ಈ ಬಾರಿ ಗೆದ್ದೇ ಗೆಲ್ಲುತ್ತೇನೆ ಎಂಬ ಖಾತರಿ ಇರಲಿಲ್ಲ. ನನ್ನ ಕೋಚ್ ನನಗೆ ಈ ಪಾರಿತೋಷಕ ಎಷ್ಟು ಮುಖ್ಯ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದರು. ನಾನು ಎತ್ತಲೇಬೇಕಾಗಿತ್ತು. ಒಟ್ಟು 249 ಕೆಜಿ ಎತ್ತಿ ನನಗೆ ಬೆಳ್ಳಿ ಪದಕ ಸಿಕ್ಕಿತು, ನಾನು ಇನ್ನೂ ಉತ್ತಮ ಸಾಧನೆ ತೋರಿಸಬಹುದಾಗಿತ್ತು ಎನ್ನುತ್ತಾರೆ ಗುರುರಾಜ್.

ನನ್ನ ಹಣವನ್ನು ತರಬೇತಿಗೆ ಬಳಸುತ್ತೇನೆ: ಗುರುರಾಜ್: ಕುಸ್ತಿಪಟುವಾದ ನಂತರ ಗುರುರಾಜ್ ಜೀವನದಲ್ಲಿ ಎಂದಿಗೂ ಹಿಂತಿರುಗಿ ನೋಡಲಿಲ್ಲ. ಕಾಲೇಜಿನಲ್ಲಿ ನಾನು ತರಗತಿಗೆ ಸಹ ಹೋಗುತ್ತಿದ್ದೆ. ಹಣಕಾಸಿನ ವಿಷಯದಲ್ಲಿ ನನ್ನ ಕುಟುಂಬ ಸಹಾಯ ಮಾಡುತ್ತದೆ. ಕಳೆದ ಕಾಮನ್ ವೆಲ್ತ್ ನಲ್ಲಿ ಪದಕ ಗೆದ್ದ ವಿಕಾಸ್ ಠಾಕೂರ್ ನನಗೆ ಪ್ರೇರಣೆಯಾಗಿದ್ದಾರೆ. ಅವರನ್ನು ನೋಡಿ ನಾನು ಕೂಡ ಪದಕ ಗೆಲ್ಲಬೇಕೆಂದು ಅಂದುಕೊಳ್ಳುತ್ತಿದ್ದೆ ಎನ್ನುತ್ತಾರೆ.

ರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸುವ ಮೊದಲು ಪ್ರಶಸ್ತಿ ಹಣದಿಂದ ಬಂದಿರುವ ಅಲ್ಪ ಮೊತ್ತವನ್ನು ನಾನು ತರಬೇತಿಗೆ ಬಳಸುತ್ತಿದ್ದೆ. ವಿಶ್ವವಿದ್ಯಾಲಯವೊಂದರಲ್ಲಿ 25,000 ರೂಪಾಯಿ ಗೆದ್ದಾಗ ನನ್ನ ಡಯಟ್ ಮತ್ತು ಕ್ರೀಡಾ ಸಾಧನಗಳ ಖರೀದಿಗೆ ಬಳಸಿಕೊಂಡೆ. ಗುರುರಾಜ್ ಗೆ ಭಾರತೀಯ ಸೇನೆಯಲ್ಲಿ ಎತ್ತರದ ಸಮಸ್ಯೆಯಿಂದಾಗಿ ಕೆಲಸ ಸಿಗಲಿಲ್ಲವಂತೆ. ಆದರೆ ಕೆಲಸದ ಅನಿವಾರ್ಯತೆಯಿತ್ತು. ಭಾರತೀಯ ವಾಯುಪಡೆಯಲ್ಲಿ ಎತ್ತರ 152 ಸೆಂಟಿ ಮೀಟರ್ ಸಾಕಾಗಿತ್ತು. ಹೀಗಾಗಿ ಕೆಲಸ ಸಿಕ್ಕಿತು ಎಂದರು.

ಕುಂದಾಪುರ ತಾಲ್ಲೂಕಿನ ವಂಡ್ಸೆಯಲ್ಲಿ ಸರ್ಕಾರಿ ಪ್ರೈಮರಿ ಶಾಲೆಯಲ್ಲಿ ಓದುವಾಗ ಕ್ರೀಡೆಯ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತಂತೆ. ಅಂದಿನ ಶಾರೀರಿಕ ಶಿಕ್ಷಕರು ಅವರಿಗೆ ಪ್ರೋತ್ಸಾಹ ನೀಡಿದರು. ಕೊಲ್ಲೂರಿನ ಮೂಕಾಂಬಿಕಾ ಹೈಸ್ಕೂಲ್ ನಲ್ಲಿ ಓದುವಾಗ ಗುರುರಾಜ್ ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿತು. ಅಲ್ಲಿನ ದೈಹಿಕ ಶಿಕ್ಷಕ ಸುಕೇಶ್ ಶೆಟ್ಟಿ ಸಾಕಷ್ಟು ಪ್ರೋತ್ಸಾಹ ನೀಡಿದರಂತೆ. ಅಲ್ಲಿ ಗುರುರಾಜ್ ಗೆ ಕುಸ್ತಿಪಟುನಲ್ಲಿ ಕೂಡ ಪ್ರೋತ್ಸಾಹ ಸಿಕ್ಕಿತು. ನಂತರ ಎಸ್ ಡಿಎಂ ಕಾಲೇಜು ಉಜಿರೆಯಲ್ಲಿ ಪದವಿಗೆ ಸೇರಿ ಅಲ್ಲಿ ರಾಜೇಂದ್ರ ಪ್ರಸಾದ್ ಅವರ ಬಳಿ ಕುಸ್ತಿಪಟು ವಿಭಾಗದಲ್ಲಿ ತರಬೇತಿ ಪಡೆದರು.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಕಾಮನ್ ವೆಲ್ತ್ ಚಾಂಪಿಯನ್ ಷಿಪ್ ನಲ್ಲಿ ಗುರುರಾಜ್ ಗೆ ಕಂಚಿನ ಪದಕ ಬಂದಿತ್ತು. 2010ರಲ್ಲಿ ಕುಸ್ತಿಪಟು ಕ್ರೀಡೆಯಲ್ಲಿ ಪಂದ್ಯಗಳಲ್ಲಿ ಭಾಗವಹಿಸಲು ಆರಂಭಿಸಿದ ಗುರುರಾಜ್ ಕಾಮನ್ ವೆಲ್ತ್ ಹಿರಿಯರ ಕುಸ್ತಿಪಟು ಚಾಂಪಿಯನ್ ಷಿಪ್ ನಲ್ಲಿ 2016ರಲ್ಲಿ ಪೆನಂಗ್ ನಲ್ಲಿ ನಡೆದ 249 ಕೆಜಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು. ಅದಕ್ಕೂ ಮುನ್ನ ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com