ಗೋಲ್ಡ್ ಕೋಸ್ಟ್: 21ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಟೇಬಲ್ ಟೆನಿಸ್ ಸ್ಪರ್ಧೆಯ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ, ಮಲೇಷ್ಯಾ ವಿರುದ್ಧ 3–0 ಅಂತರದಿಂದ ಗೆಲುವು ಸಾಧಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದೆ.
ಆರಂಭಿಕ ಪಂದ್ಯದಲ್ಲಿ ಭಾರತದ ಮಣಿಕಾ ಬಾತ್ರಾ ಅವರು ಮಲೆಷ್ಯಾದ ಯಿಂಗ್ ಹೊ ವಿರುದ್ಧ 11–9, 11–7 11–7ರಿಂದ ಗೆದ್ದರು.
ಎರಡನೇ ಪಂದ್ಯದಲ್ಲಿ ಕರೇನ್ ಲ್ಯಾನೆ ವಿರುದ್ಧ ಸಹ ಆಟಗಾರ್ತಿ ಮಧುರಿಕಾ ಪಟ್ಕಾರ್ ಅವರು ಎಡವಿದರೂ ಬಳಿಕ ಚೇತರಿಸಿಕೊಂಡ ಭಾರತ ತಂಡ, ಮುಂದಿನ ಎರಡು ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿ ಮಲೇಷ್ಯಾ ವಿರುದ್ಧ 7-11, 11-9, 11-9, 11-3 ಅಂತರದಿಂದ ಗೆಲುವು ಸಾಧಿಸಿತು.
ಮಧುರಿಕಾ ಹಾಗೂ ಮೌಮಾ ದಾಸ್ ಜೋಡಿ ಮಲೇಷ್ಯಾದ ಯಿಂಗ್ ಹೊ ಮತ್ತು ಐ ಜಿನ್ ತೀ ಜೋಡಿಯನ್ನು ಸೋಲಿಸಿ ಭಾರತ ಪಾಳಯದಲ್ಲಿ ಸಂತಸದ ಅಲೆ ಎಬ್ಬಿಸಿದರು.