ಕೊಯಮತ್ತೂರು: ಚಿನ್ನದ ಪದಕ ಗೆದ್ದು ನಮ್ಮ ದೇಶಕ್ಕೆ ಗೌರವ ತಂದುಕೊಟ್ಟಿದ್ದರು ಜೀವನೋಪಾಯಕ್ಕಾಗಿ ಟೀ ಮಾರಿ ಬದುಕುವಂತ ದುರ್ಗತಿ ನಮ್ಮ ಭಾರತೀಯ ಅಥ್ಲೀಟ್ ಗೆ ಎದುರಾಗಿದೆ..ತಮಿಳುನಾಡು ಮೂಲದ ರಾಜ್ಯ ಮಟ್ಟದ ಓಟಗಾರ್ತಿ ಕಲೈಮಣಿ ಅವರು ಮೂರು ಮಕ್ಕಳ ತಾಯಿಯಾಗಿದ್ದು ತನ್ನ ಸಂಸಾರ ನಿರ್ವಹಣೆಗಾಗಿ ಟೀ ಮಾರಿ ಜೀವನ ನಡೆಸುತ್ತಿದ್ದಾರೆ. .45 ವರ್ಷದ ಕಲೈಮಣಿ ಅವರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ನಾಲ್ಕು ಚಿನ್ನದ ಪದಕಗಳು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. .ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಲೈಮಣಿ ಅವರು ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಯಾವುದೇ ಸಹಾಯವನ್ನು ಮಾಡುತ್ತಿಲ್ಲ ಎಂದು ಹೇಳಿದ್ದಾರೆ. .ಕಲೈಮಣಿ ಅವರು ಶಾಲೆಯಲ್ಲಿದಾಗ ಕಬಡ್ಡಿ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos