ಕಾಮನ್‌ವೆಲ್ತ್: ಕುಸ್ತಿ ಪಟು ವಿನೇಶಾ ಪೋಗಟ್‌, ಬಾಕ್ಸರ್ ವಿಕಾಸ್ ಕೃಷ್ಣನ್ ಗೆ ಚಿನ್ನ

21 ನೇ ಆವೃತ್ತಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ನಿರಂತರವಾಗಿ ಸಾಗಿದ್ದು ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಭಾರತದ ವಿನೇಶ್ ಪೋಗಟ್‌ ಚಿನ್ನ ಹಾಗೂ ಒಲಂಪಿಕ್ ಕಂಚು.........
ಅಖಾಡದಲ್ಲಿ ಎದುರಾಳಿ ಜತೆ ವಿನೇಶ್ ಪೋಗಟ್‌
ಅಖಾಡದಲ್ಲಿ ಎದುರಾಳಿ ಜತೆ ವಿನೇಶ್ ಪೋಗಟ್‌
ಗೋಲ್ಡ್ ಕೋಸ್ಟ್: 21 ನೇ ಆವೃತ್ತಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ನಿರಂತರವಾಗಿ ಸಾಗಿದ್ದು ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಭಾರತದ ವಿನೇಶ್  ಪೋಗಟ್‌ ಚಿನ್ನ ಹಾಗೂ ಒಲಂಪಿಕ್ ಕಂಚು ವಿಜೇತೆ ಸಾಕ್ಷಿ ಮಲಿಕ್ ಕಂಚಿನ ಪದಕ ಗಳಿಸಿದ್ದಾರೆ.
ಮಹಿಳೆಯರ 50 ಕೆ.ಜಿ. ಫ್ರೀಸ್ಟೈಲ್‌ ಕುಸ್ತಿ ಪಂದ್ಯಾವಳಿಯಲ್ಲಿ ಭಾರತದ ವಿನೇಶ್ ಪೋಗಟ್‌, ಕೆನಡಾದ ಜೆಸ್ಸಿಕಾ ಮೆಕ್ಡೊನಾಲ್ಡ್ ವಿರುದ್ಧ ನಡೆದ ಫೈನಲ್ ಹಣಾಹಣಿಯನ್ನು ಜಯಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ವಿನೇಶ್ ಒಟ್ಟು 13 ಪಾಯಿಂಟ್ ಗಳನ್ನು ಪಡೆದು ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಎರಡು ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ವಿನೇಶಾ ಭಾಜನರಾದರು.
ಏತನ್ಮಧ್ಯೆ 62 ಕೆ.ಜಿ ನೋರ್ಡಿಕ್ ವಿಭಾಗದಲ್ಲಿ ಒಲಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಟೇಲಾ ಫೋರ್ಡ್ ಅವರೊಡನೆ ನಡೆಸಿದ ಕಠಿಣ ಹೋರಾಟದಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.
2014  ಗ್ಲ್ಯಾಸ್ಗೋ ಕೂಟದಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಅವರು ಚಿನ್ನದ ಪದಕ ಗೆದ್ದು ಬೀಗಿದ್ದರು.
ಪುರುಷರ 125 ಕೆ.ಜಿ. ಫ್ರೀಸ್ಟೈಲ್‌ ವಿಭಾಗದ ಫೈನಲ್‌ನಲ್ಲಿ ನೈಜೀರಿಯಾದ ಸಿನಿವಿ ಬೋಲ್ಟಿಕ್‌ ಅವರು ಗಾಯದ ಕಾರಣ ಪಂದ್ಯದಿಂದ ಹೊರಗುಳಿದಿದ್ದು, ಭಾರತದ ಸುಮಿತ್‌ ಮಲಿಕ್‌ ಅವರಿಗೆ ಚಿನ್ನ ಲಭಿಸಿದೆ.
ಇದರೊಂದಿಗೆ, ಕ್ರೀಡಾಕೂಟದಲ್ಲಿ ಭಾರತದ ಪದಕ ಪಟ್ಟಿಯಲ್ಲಿ 23 ಚಿನ್ನ, 13 ಬೆಳ್ಳಿ ಮತ್ತು 16 ಕಂಚು ಸೇರಿದಂತೆ ಒಟ್ಟು 52 ಪದಕಗಳನ್ನು ಬಾಚಿಕೊಂಡಿದೆ.
ಬಾಕ್ಸಿಂಗ್ ನಲ್ಲಿ ಮತ್ತೊಂದು ಚಿನ್ನ
ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ 75 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಇನ್ನೊಂದು ಚಿನ್ನ ದಕ್ಕಿದೆ. ಬಾಕ್ಸರ್ ವಿಕಾಸ್ ಕೃಷ್ಣನ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com