ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್: ಕಿಡಂಬಿ ಶ್ರೀಕಾಂತ್ ಪ್ರೀ- ಕ್ವಾರ್ಟರ್ ಫೈನಲ್ ಪ್ರವೇಶ

ಬಿಡಬ್ಲ್ಯೂ ಎಫ್ ವಿಶ್ವ ಚಾಂಪಿಯನ್ ಶಿಫ್ ನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್ ನ ಪ್ಯಾಬ್ಲೊ ಅಬಿಯಾನ್ ವಿರುದ್ಧ ಮೂರು ಗೇಮಿನ ಪಂದ್ಯದಲ್ಲಿ ಹೋರಾಟ ನಡೆಸಿದ ಭಾರತದ ಕಿದಂಬಿ ಶ್ರೀಕಾಂತ್ ಪ್ರೀ- ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಕಿಡಂಬಿ ಶ್ರೀಕಾಂತ್
ಕಿಡಂಬಿ ಶ್ರೀಕಾಂತ್

ನಾಂಜಿಂಗ್ : ಬಿಡಬ್ಲ್ಯೂ ಎಫ್ ವಿಶ್ವ ಚಾಂಪಿಯನ್ ಶಿಫ್ ನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ  ಸ್ಪೇನ್ ನ ಪ್ಯಾಬ್ಲೊ ಅಬಿಯಾನ್ ವಿರುದ್ಧ ಮೂರು ಗೇಮಿನ ಪಂದ್ಯದಲ್ಲಿ ಹೋರಾಟ ನಡೆಸಿದ  ಭಾರತದ ಕಿಡಂಬಿ ಶ್ರೀಕಾಂತ್  ಪ್ರೀ- ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಪ್ಯಾಬ್ಲೊ ವಿರುದ್ಧ 62 ನಿಮಿಷಗಳ ಕಾಲ ನಡೆದ  ಎರಡನೇ ಸುತ್ತಿನ ಪಂದ್ಯದಲ್ಲಿ  21-15, 12-21-14 ಅಂತರದಿಂದ  ಐದನೇ ಶ್ರೇಯಾಂಕದ ಭಾರತೀಯ ಆಟಗಾರ ಕಿಡಂಬಿ  ಶ್ರೀಕಾಂತ್  ಪ್ರಬಲ  ಹೋರಾಟ ನಡೆಸಿದರು.

ಕಳೆದ ವರ್ಷ ಶ್ರೀಕಾಂತ್ ನಾಲ್ಕು ಬಾರಿ ಪ್ರಶಸ್ತಿ ಪಡೆದಿದ್ದರು. 2012ರಲ್ಲಿ ಫ್ರೆಂಚ್ ಒಪನ್ ಸಿರಿಸ್ ನಲ್ಲಿ ಗೆದ್ದಿದ್ದ ಮಾಜಿ ಹತ್ತನೇ ಶ್ರೇಯಾಂಕ ಆಟಗಾರ ಮಲೇಷಿಯಾದ ಡೆರೆನ್ ಲಿವು ವಿರುದ್ಧ  ಶ್ರೀಕಾಂತ್ ಗೆಲುವು ಸಾಧಿಸಿದ್ದರು.

ಶ್ರೀಕಾಂತ್  ಆರಂಭಿಕ ಪಂದ್ಯಗಳಲ್ಲಿ 16-13 ರಿಂದ ಮುನ್ನಡೆ ಕಾಯ್ದುಕೊಳ್ಳುವ ಮುನ್ನಾ  2-4 ಮತ್ತು 6-8 ಕೊರತೆಗಳನ್ನು ಅನುಭವಿಸಿದ್ದರು. ನಂತರ  ಪ್ರಬಲ ಹೋರಾಟದ ಮೂಲಕ
ನಾಲ್ಕು ಅಂಕಗಳಿಂದ ಪ್ಯಾಬ್ಲೊ ಅವರನ್ನು ಹಿಮ್ಮೆಟ್ಟಿಸಿದರು.  ಪ್ಯಾಬ್ಲೊ  ಚೇತರಿಸಿಕೊಳ್ಳಲು ಯತ್ನಿಸಿದ್ದರಾದರೂ ಅದಕ್ಕೆ ಭಾರತದ ಆಟಗಾರ ಅವಕಾಶ ಮಾಡಿಕೊಡಲಿಲ್ಲ.

ಎರಡನೇ ಪಂದ್ಯದಲ್ಲಿ, ಶ್ರೀಕಾಂತ್ 6-3 ಮುನ್ನಡೆ ಸಾಧಿಸಿದ್ದರು ಆದರೆ ಪಬ್ಲೊ ಆರು ಪಾಯಿಂಟ್ಗಳ ಮೇಲೆ ಮುಂದಕ್ಕೆ ಸಾಗಿದರು. ಶ್ರೀಕಾಂತ್ 10-12 ರಲ್ಲಿದ್ದರೆ, ಸ್ಪೇನ್ ಆಟಗಾರ ಏಳು ಅಂಕಗಳಿಂದ ಮುಂದಿದ್ದರು.

ನಿರ್ಣಾಯಕ ಪಂದ್ಯದಲ್ಲಿ,  ಬ್ಯಾಬ್ಲೊ 11-9 ಅಂಕಗಳನ್ನು ಪಡೆದು ಅನುಕೂಲ ಮಾಡಿಕೊಂಡಿದ್ದರು. ಆದರೆ ವಿರಾಮದಲ್ಲಿ ಶ್ರೀಕಾಂತ್  ಪುಟಿದೆದ್ದು, ಸ್ಪೇನ್ ಆಟಗಾರ ಪುಟಿದೇಳದಂತೆ ಮಾಡುವ ಮೂಲಕ ಫ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com