ಏಷ್ಯನ್ ಗೇಮ್ಸ್: ಭಾರತೀಯ ಅಥ್ಲೀಟ್ ಗೆ ಸರಿಹೊಂದುವ ಶೂಗಳೇ ಭಾರತದಲ್ಲಿಲ್ಲ, ಸ್ವಪ್ನಾ ಅಳಲು!

ಪ್ರತಿಷ್ಠಿತ ಟೂರ್ನಿಗಳಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವುದಿಲ್ಲವೆಂದು ಆರೋಪಿಸಲಾಗುತ್ತದೆ. ಆದರೆ ಅವರಿಗಿರುವ ಸಮಸ್ಯೆಗಳ ಬಗ್ಗೆ ಬಹುತೇಕರು ತಲೆಕೆಡಿಸಿಕೊಳ್ಳುವುದಿಲ್ಲ...
ಸ್ವಪ್ನ ಬರ್ಮನ್
ಸ್ವಪ್ನ ಬರ್ಮನ್
ಜಕಾರ್ತ: ಪ್ರತಿಷ್ಠಿತ ಟೂರ್ನಿಗಳಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವುದಿಲ್ಲವೆಂದು ಆರೋಪಿಸಲಾಗುತ್ತದೆ. ಆದರೆ ಅವರಿಗಿರುವ ಸಮಸ್ಯೆಗಳ ಬಗ್ಗೆ ಬಹುತೇಕರು ತಲೆಕೆಡಿಸಿಕೊಳ್ಳುವುದಿಲ್ಲ. 
ಪಶ್ಚಿಮ ಬಂಗಾಳದಲ್ಲಿರುವ ಅಥ್ಲೀಟ್ ಸ್ವಪ್ನಾ ಬರ್ಮನ್ ಹೆಪ್ಟಾಥ್ಲಾನ್ ಸ್ಪರ್ಧಿಗೆ ಕಾಲಿನಲ್ಲಿ ಆರು ಬೆರಳುಗಳಿವೆ. ಆದ್ದರಿಂದ ಆಕೆಯ ಪಾದಗಳು ಬಹಳ ಅಗಲ. ಆಕೆಗೆ ಸರಿಹೊಂದುವಂತಹ ಕ್ರೀಡಾ ಶೂಗಳು ಇಡೀ ಭಾರತದಲ್ಲೇ ಸಿಗುತ್ತಿಲ್ಲ. ಈಗ ಆಕೆ ತನ್ನಲ್ಲಿರುವ ಹಳೇ ಶೂಗಳೊಂದಿಗೆ ಏಷ್ಯಾನ್ ಗೇಮ್ಸ್ ನಲ್ಲಿ ಸ್ಪರ್ಧಿಸಬೇಕಿದೆ. 
ಸ್ವಪ್ನಾರ ಸ್ಪರ್ಧೆಗಳು ಆಗಸ್ಟ್ 28ರಿಂದ ಶುರುವಾಗಲಿದೆ. ಅದಕ್ಕೂ ಮುನ್ನ ಆಕೆಗೆ ಶೂಗಳನ್ನು ಹೊಂದಿಸಿಕೊಳ್ಳುವುದು ಹೇಗೆ ಎಂಬುದೇ ಚಿಂತೆ. ತನ್ನ ಕಾಲಿಗೆ ತಕ್ಕಂತೆ ರೂಪುಗೊಳಿಸಿದ ಶೂಗಳು ತನಗೆ ಯಾವಾಗಲೂ ಸಿಗಲಿಲ್ಲ. ಅದರ ಬದಲಿಗೆ ಒಂದು ಮಾಡೆಲ್ ನ ಶೂಗಳನ್ನು ಬಳಸಲು ಆರಂಭಿಸಿದ್ದೆ. ಆದರೆ ಈಗ ಅಂತಹ ಶೂಗಳೇ ಭಾರತದಲ್ಲಿ ಸಿಗುವುದಿಲ್ಲ ಎಂದು ಬರ್ಮನ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com